Sunday, June 7, 2026
Homeಕರಾವಳಿಉಡುಪಿಮರಕ್ಕೆ ನೇಣುಬಿಗಿದು ಯುವಕ ಸಾವು- ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲು...!

ಮರಕ್ಕೆ ನೇಣುಬಿಗಿದು ಯುವಕ ಸಾವು- ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲು…!

- Advertisement -
- Advertisement -

ಮಣಿಪಾಲ: ಯುವಕನೋರ್ವ ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡುಸಗ್ರಿಯಲ್ಲಿ ನಡೆದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ ಆತ್ಮಹತ್ಯೆಗೈದು ಮೂರು ದಿನಗಳು ಕಳೆದಿರಬಹುದೆಂದು ಶಂಕಿಸಲಾಗಿದೆ.

ಮೃತ ಯುವಕ ಮೂಡುಸಗ್ರಿಯ ಮುಕುಂದ ನಾಯ್ಕ ಅವರ ಮಗ ನವೀನ್ ನಾಯ್ಕ (32) ಎಂದು ಗುರುತಿಸಲಾಗಿದೆ. ಯುವಕನಿಗೆ ವಿಪರೀತ ಕುಡಿತದ ಚಟ ಹೊಂದಿರುವುದಾಗಿ ತಿಳಿದುಬಂದಿದೆ.

ಠಾಣಾಧಿಕಾರಿ ಸುಧಾಕರ್ ಟಿ ತೋನ್ಸೆ ಸ್ಥಳದಲ್ಲಿದ್ದು, ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಗೆ ಸಹಕರಿಸಿದರು.

- Advertisement -

Latest News

error: Content is protected !!