Saturday, June 6, 2026
Homeಅಪರಾಧಮಂಗಳೂರು: ಮೈದಾ ಹಿಟ್ಟು ಖರೀದಿಸುವಂತೆ ಹೇಳಿ 2 .9 ಲಕ್ಷ ದೋಚಿದ ದುಷ್ಕರ್ಮಿ

ಮಂಗಳೂರು: ಮೈದಾ ಹಿಟ್ಟು ಖರೀದಿಸುವಂತೆ ಹೇಳಿ 2 .9 ಲಕ್ಷ ದೋಚಿದ ದುಷ್ಕರ್ಮಿ

- Advertisement -
- Advertisement -

ಮಂಗಳೂರು: ಮೈದಾ ಹಿಟ್ಟು ಖರೀದಿ ಮಾಡಲು ಇದೆ ಎಂದು ನಂಬಿಸಿ ಆರ್ಮಿಯಲ್ಲಿ ದುಡಿಯುತ್ತಿದ್ದ ಅಮನ್ ಎಂದು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬ, ಬ್ಯಾಂಕ್ ಖಾತೆಯಿಂದ 2,94,830 ರೂ. ಹಣ ವರ್ಗಾಯಿಸಿ ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಮಹಿಳೆಯೊಬ್ಬರು ಯೂನಿಯನ್ ಬ್ಯಾಂಕ್ ಪದವು ಬ್ರಾಂಚಿನಲ್ಲಿ ಖಾತೆಯನ್ನು ಹೊಂದಿದ್ದು, ಇವರ ಪತಿ ಪ್ಲೋರ್ ಮಿಲ್ ಒಂದರ ಉದ್ಯೋಗಿಯಾಗಿದ್ದಾರೆ. ಆರ್ಮಿಯಲ್ಲಿ ದುಡಿಯುತ್ತಿದ್ದ ಅಮನ್ ಎಂದು ಪರಿಚಯಿಸಿಕೊಂಡು ವ್ಯಕ್ತಿ ಕರೆ ಮಾಡಿ ಮೈದಾ ಖರೀದಿಸುವುದಾಗಿ ತಿಳಿಸಿದ್ದಾರೆ. ಅದರ ಹಣ ಪಾವತಿಸಲು ಕ್ಯೂ ಆರ್ ಕೋಡ್ ಕಳುಹಿಸುವಂತೆ ತಿಳಿಸಿರುತ್ತಾರೆ. ತನ್ನ ಪತಿ ಹಾಗೂ ಕಂಪನಿಯ ಮೊಬೈಲ್ ನಲ್ಲಿ ಯಾವುದೇ ಕ್ಯೂ ಆರ್ ಕೋಡ್ ಇಲ್ಲದ ಕಾರಣ ಮಹಿಳೆ ತನ್ನ ಮೊಬೈಲ್ ನಂಬರ್ ನೀಡಿದ್ದಾರೆ.

ಆ ಬಳಿಕ ಅಪರಿಚಿತ ವ್ಯಕ್ತಿಯು ಮೊಬೈಲ್‌ಗೆ ಸಂಪರ್ಕಿಸಿ ಕ್ಯೂಆರ್ ಕೋಡ್ ಕೇಳಿ ಹಂತಹಂತವಾಗಿ 2,94,830ರೂ. ಖಾತೆಗೆ ವರ್ಗಾಯಿಸಿದ್ದಾನೆ ಎಂದು ದೂರು ನೀಡಲಾಗಿದೆ.

- Advertisement -

Latest News

error: Content is protected !!