Sunday, June 7, 2026
Homeಅಪರಾಧಉಳ್ಳಾಲ: ಅಪ್ರಾಪ್ತ ಬಾಲಕಿಗೆ ಸಾರಾಯಿ ಕುಡಿಸಿ ಸಾಮೂಹಿಕ ಅತ್ಯಾಚಾರ !

ಉಳ್ಳಾಲ: ಅಪ್ರಾಪ್ತ ಬಾಲಕಿಗೆ ಸಾರಾಯಿ ಕುಡಿಸಿ ಸಾಮೂಹಿಕ ಅತ್ಯಾಚಾರ !

- Advertisement -
- Advertisement -

ಮಂಗಳೂರು: ಅಪ್ರಾಪ್ತೆ ಓರ್ವ ಬಾಲಕಿಯ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಉಳ್ಳಾಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಮೂವರನ್ನು ಈಗಾಗಲೇ ಬಂಧಸಿಲಾಗಿದೆ.

ಬಾಲಕಿಗೆ ಸಾರಾಯಿ ಕುಡಿಸಿ, ಹಾಗೂ ನಿದ್ದೆ ಬರುವ ಔಷಧಿ ನೀಡಿ ಮುಡಿಪು ಸಮೀಪದ ಲಾಡ್ಜ್ ನಲ್ಲಿ ಯುವತಿಯನ್ನು ಮೂವರು ಅತ್ಯಾಚಾರ ಮಾಡಿದ್ದಾರೆ ಎಂದು ಬಾಲಕಿಯ ತಾಯಿ ಕೇಸ್ ದಾಖಲಿಸಿದ್ದಾರೆ.

ಬಂಧಿತರಲ್ಲಿ ಇಬ್ಬರು ಅನ್ಯಕೋಮಿನ ಯುವಕರು ಮತ್ತು ಒರ್ವ ಯುವತಿಯದ್ದೇ ಕೋಮಿನ ಹುಡುಗ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಈ ಹಿಂದೆ ಕೂಡ ಇದೇ ಯುವತಿ ಮಂಗಳೂರಿನ ಚಿಲಿಂಬಿಗುಡ್ಡದಲ್ಲಿ ಅನ್ಯಧರ್ಮದ ಯುವಕನೊಬ್ಬ, ಇನ್ನೋರ್ವ ಯುವಕನ ಜೊತೆ ಹಿಂದೂ ಸಂಘಟನೆಯ ಕೈಗೆ ಸಿಕ್ಕಿಬಿದ್ದಿದ್ದಳು, ಆ ಸಮಯದಲ್ಲಿ ಅಲ್ಲಿದ್ದ ಯುವಕರು ಡ್ರಗ್ಸ್ ಸೇವಿಸಿರುವುದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹಾಗೇ ಈ ಯುವತಿ ಹಿಂದೊಮ್ಮೆ ನಾಪತ್ತೆಯಾಗಿದ್ದಳು, ಆ ಪ್ರಕರಣ ಕೂಡ ದಾಖಲಾಗಿತ್ತು. ಪತ್ತೆಯಾದ ನಂತರ ಪೊಲೀಸ್ ಸಿಬ್ಬಂದಿಯು ಈಕೆಯ ನಂಬರ್ ಪಡೆದು ಮೆಸೇಜ್ ಮಾಡಿ ಅನುಚಿತವಾಗಿ ವರ್ತಿಸಿದ್ದರು ಎಂದು ಅವರನ್ನೂ ಸೇವೆಯಿಂದ ಅಮಾನತು ಮಾಡಿ ಅವರ ಮೇಲೂ ಪ್ರಕರಣ ದಾಖಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.

- Advertisement -

Latest News

error: Content is protected !!