Thursday, June 4, 2026
HomeಕರಾವಳಿBREAKING NEWS ಮಂಗಳೂರಿನ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ !

BREAKING NEWS ಮಂಗಳೂರಿನ ನಾಲ್ವರ ಆತ್ಮಹತ್ಯೆಗೆ ಮತಾಂತರ ಯತ್ನವೇ ಕಾರಣ !

- Advertisement -
- Advertisement -

ಮಂಗಳೂರಿನ ಮಾರ್ಗನ್ಸ್ ಗೇಟ್ ನಲ್ಲಿ ನಾಲ್ವರು ಆತ್ಮಹತ್ಯೆ ಕೇಸ್ ನಲ್ಲಿ ಮತಾಂತರ ಆರೋಪ ಪ್ರಕರಣದ ಕುರಿತು ಮಂಗಳೂರು ಪೊಲೀಸರ ತನಿಖೆಯಲ್ಲಿ ಮತಾಂತರ ಯತ್ನದ ವಿಚಾರ ಬಹಿರಂಗ ಪಡಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಸುನಗ್ ಗ್ರಾಮದ ಬೀಳಗಿ ಮೂಲದ ಕುಟುಂಬ ನಾಗೇಶ್ ಶೇರಿಗುಪ್ಪಿ(30), ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್(4) ಆತ್ಮಹತ್ಯೆ ಘಟನೆ ಎಲ್ಲರಿಗೂ ತಿಳಿದಿದೆ. ಆದರೆ ಈ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಮೃತ ವಿಜಯಲಕ್ಷ್ಮಿಯನ್ನು ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿದ್ದ ನೂರ್ ಜಹಾನ್ ಎಂಬುದು ಸಾಬೀತಾಗಿದೆ. ಮಂಗಳೂರಿನಲ್ಲಿ ಮದುವೆ ಬ್ರೋಕರ್ ಆಗಿರುವ ನೂರ್ ಜಹಾನ್, ಇವರ ಮನೆಯಲ್ಲಿ ವಿಜಯಲಕ್ಷ್ಮಿ ಕೆಲಸ ಮಾಡುತ್ತಿದ್ದರು.

ಪ್ರತಿ ಬಾರಿ ಮನೆಯಲ್ಲಿ ಕುಡಿದು ಬಂದು ಪತಿ ನಾಗೇಶ್ ಜಗಳ ಮಾಡುತ್ತಿದ್ದರು, ಹಾಗೆ ಇವರ ನಡುವೆ ಮಧ್ಯೆ ಜಗಳ ನಡೆಯುತ್ತಿತ್ತು. ಇದ್ದನ್ನು ಅರಿತ ನೂರ್ ಜಹಾನ್ ಪತಿ ನಾಗೇಶ್ ಗೆ ಡೈವೋರ್ಸ್ ಕೊಡುವಂತೆ ವಿಜಯಲಕ್ಷ್ಮಿಗೆ ಹೇಳಿದ್ದರು.

ಆ ಬಳಿಕ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿಕೊಡುವುದಾಗಿಯೂ ಹೇಳಿದ್ದ ನೂರ್ ಜಹಾನ್ ಮದುವೆಗೂ ಮುನ್ನ ಇಸ್ಲಾಂಗೆ ಮತಾಂತರ ಆಗಲು ತಿಳಿಸಿದ್ದರು. ಹಾಗೇ ವಿಜಯಲಕ್ಷ್ಮಿ ಫೋಟೋ ಬಳಸಿ ಮುಸ್ಲಿಂ ಹುಡುಗನ ಹುಡುಕಾಟ ನಡೆಸಿದ್ದರು. ಇದೇ ವಿಚಾರದಲ್ಲಿ ನಾಗೇಶ್ ‌ಮತ್ತು ವಿಜಯಲಕ್ಷ್ಮಿ ಮಧ್ಯೆ ಗಲಾಟೆ ಕೂಡ ಆಗಿತ್ತು.

ಹಾಗಾಗಿ ಗಲಾಟೆ ನಡೆದು ಮಕ್ಕಳು ಮತ್ತು ಪತ್ನಿ ವಿಜಯಲಕ್ಷ್ಮಿ ಕೊಂದು ನಾಗೇಶ್ ನೇಣಿಗೆ ಶರಣಾಗಿದ್ದರು. ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ‌ ಮಹಿಳೆ ನೂರ್ ಜಹಾನ್ ಬಂಧನವಾಗಿದೆ. ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!