Thursday, June 4, 2026
Homeಕರಾವಳಿಬೆಳ್ತಂಗಡಿ: ಗ್ಯಾಸ್ ಸಂಸ್ಥೆಯಿಂದ ಬಂತು ನೀರು ತುಂಬಿದ ಸಿಲಿಂಡರ್ !!

ಬೆಳ್ತಂಗಡಿ: ಗ್ಯಾಸ್ ಸಂಸ್ಥೆಯಿಂದ ಬಂತು ನೀರು ತುಂಬಿದ ಸಿಲಿಂಡರ್ !!

- Advertisement -
- Advertisement -

ನ್ಯಾಯತರ್ಪು : ಬೆಳ್ತಂಗಡಿಯ ಗ್ಯಾಸ್ ಸಂಸ್ಥೆಯ ಮೂಲಕ ಅಡುಗೆ ಅನಿಲವನ್ನು ಇಲ್ಲಿನ ಜಾರಿಗೆ ಬೈಲು ನಿವಾಸಿ ಅಬ್ದುಲ್ ರಹೀಂ ಎಂಬವರು ಖರೀದಿಸಿದರು. ಅವರು 3 ದಿನಗಳ ಮೊದಲು ಗ್ಯಾಸ್ ಸಿಲಿಂಡರ್ ಖರೀದಿಸಿದ್ದರು. ಮನೆಯಲ್ಲಿ ಅಡುಗೆ ಮಾಡಲು ಸ್ಟವ್ ಉರಿಸಲು ಮುಂದಾದಾಗ ಸಿಲಿಂಡರ್‌ನಲ್ಲಿ ಗ್ಯಾಸ್ ಬರುವುದಿಲ್ಲ ಎಂದು ಸರಿಯಾಗಿ ಪರೀಕ್ಷಿಸಲು ಮುಂದಾದರು. ಅಗ ತಿಳಿಯಿತು, ಗ್ಯಾಸ್ ಇಲ್ಲ . ಬರೀ ನೀರು ತುಂಬಿದ ಸಿಲಿಂಡರ್ ಎಂದು.

ಇದರ ಜೊತೆ ಜೊತೆಗೆ ಇಲ್ಲಿನ ಉರುವಾಲು ಸಮೀಪದ ನಿವಾಸಿ ಹಾಗೂ ಗೇರುಕಟ್ಟೆ ಸಮೀಪದ ಎರುಕಡಪ್ಪು ವ್ಯಕ್ತಿಯೋರ್ವರು ಕೂಡ ಅನಿಲ ಸಿಲಿಂಡರ್ ಸರಬರಾಜು ಮಾಡುವ ಸಂಸ್ಥೆಯ ಮೇಲೆ ದೂರು ನೀಡಲು ಮುಂದಾಗಿದ್ದಾರೆ.

ಬಡವರ ಜೊತೆ ಚೆಲ್ಲಾಟ ನಡೆಸುವ ಸಂಸ್ಥೆಯ ವಂಚನೆಯನ್ನು ತಡೆಯಲು ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಬೇಸರದಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ , ಕಳಿಯ ಗ್ರಾಮ ಪಂಚಾಯತು ಮಾಜಿ ಸದಸ್ಯ ಇಲ್ಯಾಸ್, ಸ್ಥಳೀಯರಾದ ಅಕ್ಟ‌ ಅಲಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!