Thursday, June 4, 2026
Homeಕರಾವಳಿಉಡುಪಿಉಡುಪಿ ಶ್ರೀ ಕೃಷ್ಣ ಮಠದ 'ವಿಶ್ವಾರ್ಪಣಮ್' ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿ

ಉಡುಪಿ ಶ್ರೀ ಕೃಷ್ಣ ಮಠದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿ

- Advertisement -
- Advertisement -

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ ‘ವಿಶ್ವಾರ್ಪಣಮ್’ ಸಮಾರಂಭದಲ್ಲಿ , ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಶ್ರೀಅದಮಾರು ಮಠದ ಸೇವೆಯಲ್ಲಿರುವ ಎ.ವೆಂಕಟೇಶ, ಗ್ರಾಮೀಣ ಅಂಚೆ ಪೇದೆಯಾಗಿರುವ ಪ್ರದೀಪ್ ಕುಮಾರ್ ರವರಿಗೆ ಸನ್ಮಾನ ನಡೆಸಲಾಯಿತು.

ಶ್ರೀವಜ್ರದೇಹಿ ಮಠ ಗುರುಪುರದ ಶ್ರೀರಾಜಶೇಖರಾನಂದ ಸ್ವಾಮೀಜಿಯವರು ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಹಿಂದೂ ಸೈನಿಕ ಹುಟ್ಟಿ ಬೆಳೆದು ನಮ್ಮ ನಾಡು ರಾಮ ರಾಜ್ಯವಾಗುವಲ್ಲಿ ನೆರವಾಗಬೇಕು ಎಂದು ಹರಸಿದರು.

ಖ್ಯಾತ ಅಂಕಣಕಾರರಾದ ಚಕ್ರವರ್ತಿ ಸೂಲಿಬೆಲೆಯವರು ಹಿಂದೂ ಅಸ್ಮಿತೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಭ್ಯಾಗತರಾಗಿ ಕಟೀಲು ಕ್ಷೇತ್ರದ ಅನುವಂಶಿಕ ಮೊತ್ತೇಸರರಾದ ಮತ್ತು ಅರ್ಚಕರಾದ ವಾಸುದೇವ ಅಸ್ರಣ್ಣ , ವಿ. ವೆಂಕಟರಮಣ ಅಸ್ರಣ್ಣ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!