- Advertisement -
- Advertisement -
ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ , ಚಿಟ್ಟಾಣಿ ಅಭಿಮಾನಿ ಬಳಗ ಉಡುಪಿ ಇವರ ವತಿಯಿಂದ, ಚಿಟ್ಟಾಣಿ ಸಂಸ್ಮರಣ ಯಕ್ಷಗಾನ ಸಪ್ತಾಹ -2021 ರ ಸಮಾರೋಪ ಸಮಾರಂಭ ನಡೆಯಿತು.

ಅದಮಾರು ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು , ‘ ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿಯನ್ನು ಹಿರಿಯ ವೇಷಧಾರಿಗಳಾದ ಆರ್ಗೋಡು ಮೋಹನದಾಸ ಶೆಣೈ ಇವರಿಗೆ ಮತ್ತು ಟಿ.ವಿ.ರಾವ್ ಪ್ರಶಸ್ತಿಯನ್ನು ಹವ್ಯಾಸಿ ವೇಷಧಾರಿ ಶ್ರೀಮತಿ ಮೂಕಾಂಬಿಕಾ ವಾರಂಬಳ್ಳಿಯವರಿಗೆ ಪ್ರದಾನ ಮಾಡಿ ಕೀರ್ತಿಶೇಷ ಕಲಾವಿದರ ಹೆಸರನ್ನು ಉಳಿಸಿಕೊಂಡು ಇನ್ನಷ್ಟು ಕಲಾವಿದರು ಬರುವಂತಾಗಲಿ ಎಂದು ಎಲ್ಲರಿಗೂ ಶುಭ ಹಾರೈಸಿ ಅನುಗ್ರಹಿಸಿದರು.

ಅಭ್ಯಾಗತರಾಗಿ ಡಾ.ತಲ್ಲೂರು ಶಿವರಾಮ ಶೆಟ್ಟಿ , ಎಂ.ಗೋಪಿಕೃಷ್ಣ ರಾವ್, ಗಂಗಾಧರ ರಾವ್ ಮೊದಲಾದವರು ಉಪಸ್ಥಿತರಿದ್ದರು.
- Advertisement -