Friday, June 5, 2026
Homeಅಪರಾಧಬಂಟ್ವಾಳ: ಬೈಕ್ ಹಾಗು ಆಟೋ ರಿಕ್ಷಾ ನಡುವೆ ಡಿಕ್ಕಿ ಹೊಡೆದ ಹಿನ್ನೆಲೆ ಎರಡು ತಂಡಗಳ ಮಧ್ಯೆ...

ಬಂಟ್ವಾಳ: ಬೈಕ್ ಹಾಗು ಆಟೋ ರಿಕ್ಷಾ ನಡುವೆ ಡಿಕ್ಕಿ ಹೊಡೆದ ಹಿನ್ನೆಲೆ ಎರಡು ತಂಡಗಳ ಮಧ್ಯೆ ಹೊಡೆದಾಟ- ನಾಲ್ವರು ಪೊಲೀಸ್ ವಶಕ್ಕೆ

- Advertisement -
- Advertisement -

ಬಂಟ್ವಾಳ: ಬೈಕ್ ಹಾಗು ಆಟೋ ರಿಕ್ಷಾ ನಡುವೆ ಡಿಕ್ಕಿ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಟ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬಂಟ್ವಾಳ ಬಾರೆಕಾಡು ನಿವಾಸಿ ಇರ್ಶಾದ್, ಬಾರೆಕಾಡು ಶಾಹಿಲ್ ಹಾಗೂ ಬಂಟ್ವಾಳ ನಿವಾಸಿಗಳಾದ ಧನುಷ್ ಆಚಾರ್ಯ ಹಾಗೂ ಕೀರ್ತನ್ ಎಂದು ಗುರುತಿಸಲಾಗಿದೆ.

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ಬೈಕ್ ಮತ್ತು ಆಟೋ ರಿಕ್ಷಾಕ್ಕೆ ಅಪಘಾತ ಉಂಟಾದ ಕಾರಣಕ್ಕೆ ಸ್ಥಳಕ್ಕೆ ಬಂದ ಸ್ಥಳೀಯ ಯುವಕರು ಮತ್ತು ಆಟೋ ರಿಕ್ಷಾ ಸಂಬಂಧಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ.

ಇನ್ನು ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!