Thursday, June 4, 2026
Homeಇತರನೆಲ್ಯಾಡಿ: ವಿದ್ಯುತ್ ಸಂಪರ್ಕದ ತನಿಖೆ ನಡೆಸಲು ತೆರಳಿದ್ದ ಕರ್ತವ್ಯ ನಿರತ ಮೆಸ್ಕಾಂ ಅಧಿಕಾರಿಯ ಕೊರಳಪಟ್ಟಿ ಹಿಡಿದು...

ನೆಲ್ಯಾಡಿ: ವಿದ್ಯುತ್ ಸಂಪರ್ಕದ ತನಿಖೆ ನಡೆಸಲು ತೆರಳಿದ್ದ ಕರ್ತವ್ಯ ನಿರತ ಮೆಸ್ಕಾಂ ಅಧಿಕಾರಿಯ ಕೊರಳಪಟ್ಟಿ ಹಿಡಿದು ಹಲ್ಲೆ..!

- Advertisement -
- Advertisement -

ನೆಲ್ಯಾಡಿ: ಗುಂಡ್ಯ ಬಳಿ ವಿದ್ಯುತ್ ಸಂಪರ್ಕದ ತನಿಖೆ ನಡೆಸಲು ತೆರಳಿದ್ದ ವೇಳೆ ಕರ್ತವ್ಯ ನಿರತ ಮೆಸ್ಕಾಂ ಅಧಿಕಾರಿಯ ಕೊರಳಪಟ್ಟಿಯನ್ನು ಹಿಡಿದು ಗ್ರಾ.ಪಂ ಉಪಾಧ್ಯಕ್ಷ ಹಾಗೂ ಸದಸ್ಯ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.

ಮೆಸ್ಕಾಂ ನೆಲ್ಯಾಡಿ ಶಾಖಾ ಇಂಜಿನಿಯರ್ ರಮೇಶ್ .ಬಿ. ಹಲ್ಲೆಗೊಳಗಾದ ವ್ಯಕ್ತಿ. ಕರ್ತವ್ಯದ ನಿಮಿತ್ತ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ, ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಸ್ತೆ ಪಕ್ಕದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಎಂ ಕೆ ಪೌಲೋಸ್ ಮತ್ತು ಕಾರ್ತಿಕೇಯನ್ ಎಂಬವರು ಬಂದು ಅಧಿಕಾರಿ ಜೊತೆಗೆ ಇದ್ದ ಇಲಾಖೆ ಸಿಬ್ಬಂದಿಗಳಾದ ರಜಾಕ್ ಮೌಲಾಸಾಬ, ನದಾಫ್ ಮತ್ತು ಅಡಿವೆಪ್ಪ ಮಾದರ ರವರನ್ನು ಉದ್ದೇಶಿಸಿ ಸಾರ್ವಜನಿಕ ಶೌಚಾಲಯ ಕಟ್ಟಡದ ವಿದ್ಯುತ್ ಸಂಪರ್ಕದ ವಿಚಾರದಲ್ಲಿ ಅವಾಚ್ಯ ಪದಗಳಿಂದ ಬೈದು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.

- Advertisement -

Latest News

error: Content is protected !!