Sunday, June 7, 2026
Homeಕರಾವಳಿದೇವಸ್ಥಾನದಲ್ಲಿರುವ ಭಗವಾಧ್ವಜವನ್ನು ತೆಗೆಯೋಕೆ ನೋಡಿದ್ರೆ ಹಿಂದೂ ಸಮಾಜ ಸುಮ್ಮಿನರಲ್ಲ: ರಾಧಕೃಷ್ಣ ಅಡ್ಯಾಂತಾಯ ಎಚ್ಚರಿಕೆ

ದೇವಸ್ಥಾನದಲ್ಲಿರುವ ಭಗವಾಧ್ವಜವನ್ನು ತೆಗೆಯೋಕೆ ನೋಡಿದ್ರೆ ಹಿಂದೂ ಸಮಾಜ ಸುಮ್ಮಿನರಲ್ಲ: ರಾಧಕೃಷ್ಣ ಅಡ್ಯಾಂತಾಯ ಎಚ್ಚರಿಕೆ

- Advertisement -
- Advertisement -

ಬಂಟ್ವಾಳ: ಧಾರ್ಮಿಕ ಭಾವನೆಗಳನ್ನು ಕೆರಳಿಸಬೇಡಿ. ದೇವಸ್ಥಾನದಲ್ಲಿರುವ ಭಗವಾಧ್ವಜವನ್ನು ಪುಂಜಾಲಕಟ್ಟೆ ಪೊಲೀಸ್ ಠಾಣಾ ಎಸ್ ಐ ಸೌಮ್ಯಾ ತೆಗೆಯೋಕೇ ಹೇಳ್ತಾರೆ. ಇದೇನು ಘೋರಿ ಮೊಹಮ್ಮದ್ ಕಾಲವಾ..? ಟಿಪ್ಪು ಸುಲ್ತಾನ್ ಕಾಲವಾ..? ನಾವು ಒಂದು ವಾರದಲ್ಲಿ ಸಾವಿರ ಧ್ವಜಗಳನ್ನು ಹಾಕ್ತೇವೆ ನೋಡಿ” ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸ್ಥಳೀಯ ಪೊಲೀಸ್ ಭಗವದ್ವಜವನ್ನು ತೆಗೆಯಲು ಹೇಳ್ತಾರಲ್ವಾ..? ತಾಕತ್ತಿದ್ರೆ ಭಗವಾಧ್ವಜ ತೆಗೆಯಲಿ. ಇದನ್ನೆಲ್ಲ ಮಕ್ಕಳಾಟ ಅಂತಾ ಯೋಚಿಸಿದ್ರಾ..? ಹಿಂದೂ ಸಮಾಜ ಫುಟ್ಬಾಲ್ ಅಲ್ಲ, ಹಿಂದೂ ಸಮಾಜ ಕಲ್ಲುಗುಂಡು. ಕಾಲು ಮುರಿತ್ತೀವಿ ನಿಮ್ದು” ಎಂದವರು ಎಚ್ಚರಿಕೆ ನೀಡಿದ್ದಾರೆ.

ಪುಂಜಾಲಕಟ್ಟೆ ಠಾಣೆಯ ಪಿಎಸ್ಐ ಸೌಮ್ಯರಿಂದ ಸ್ಪಷ್ಟನೆ
ಈ ಬಗ್ಗೆ ಪುಂಜಾಲಕಟ್ಟೆ ಪಿಎಸ್ಐ ಸೌಮ್ಯ ಅವರು ಸ್ಪಷ್ಟನೆ ನೀಡಿದ್ದು – ನಾನು ಅಗಲಿ, ಅಥವಾ ನಮ್ಮ ಠಾಣೆಯ ಸಿಬ್ಬಂದಿಗಳು ಯಾರು ಕೂಡ ಈ ರೀತಿಯಲ್ಲಿ ಹೇಳಲಿಲ್ಲ ಎಂದು ಮಾಹಿತಿ ನೀಡಿದ್ದಾರೆ‌.

- Advertisement -

Latest News

error: Content is protected !!