Friday, June 5, 2026
Homeಕರಾವಳಿಕಡಬ: ಪತಿ ತನ್ನ ಪತ್ನಿ ಹಾಗು ಮಗಳನ್ನು ದಾರಿ ಮಧ್ಯೆ ಬಿಟ್ಟು ಹೋದ ಪ್ರಕರಣ...! ಆರೋಪಿಗೆ...

ಕಡಬ: ಪತಿ ತನ್ನ ಪತ್ನಿ ಹಾಗು ಮಗಳನ್ನು ದಾರಿ ಮಧ್ಯೆ ಬಿಟ್ಟು ಹೋದ ಪ್ರಕರಣ…! ಆರೋಪಿಗೆ ಜಾಮೀನು ಮಂಜೂರು…!

- Advertisement -
- Advertisement -

ಕಡಬ: ಪತ್ನಿಗೆ ಹಲ್ಲೆ ನಡೆಸಿ ತಾಯಿ ಮಗಳನ್ನು ದಾರಿ ಮಧ್ಯೆ ಬಿಟ್ಟು ಮಗನೊಂದಿಗೆ ಹೋಗಿದ್ದ ಪ್ರಕರಣದ ಆರೋಪಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.

ಜಯಪ್ರಿಯ ಅವರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿದ್ದು, ಈ ಪೈಕಿ ಮಗ ಬುದ್ಧಿ ಮಾಂದ್ಯನಾಗಿದ್ದಾನೆ. ಮದುವೆಯಾದ ಬಳಿಕ ಪತಿ ತನಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ಬಗ್ಗೆ, ಪುತ್ತೂರು ಮಹಿಳಾ ಪೊಲೀಸ್ ಠಾಣೆ ಹಾಗೂ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ದೂರು ನೀಡಿ ತಿಳುವಳಿಕೆ ನೀಡಿದ್ದರೂ ಸರಿಯಾಗಿರಲಿಲ್ಲ.

ಸಿರಿಬಾಗಿಲು ಗ್ರಾಮದ

ನೀರಾಯದ ಮಹಿಳೆ ತನ್ನ ಪತಿಯ ವಿರುದ್ದ ಕಳೆದ ಅ.27ರಂದು ತಾನು ಮಕ್ಕಳು ಹಾಗೂ ಗಂಡನೊಂದಿಗೆ ಒಮ್ಮೆ ಕಾರಲ್ಲಿ ನೆಲ್ಯಾಡಿಗೆ ಬಂದು ವೈದ್ಯರಲ್ಲಿ ಮಕ್ಕಳಿಗೆ ಔಷಧಿ ಪಡೆದುಕೊಂಡು ಹೋಗುತ್ತಿದ್ದ ಸಂದರ್ಭ ಸಿರಿಬಾಗಿಲು ಗ್ರಾಮದ ಪಿಲಿಚ್ಚಾರು ಎಂಬಲ್ಲಿಗೆ ತಲುಪಿದಾಗ ಮನೆಗೆ ದಿನಸಿ ಸಾಮಾಗಿ ಹಾಗೂ ಕೋಳಿ ಮಾಂಸ ತೆಗೆದುಕೊಳ್ಳುವ ವಿಚಾರದಲ್ಲಿ ಪತಿ ತನ್ನನ್ನು ಅವಾಚ್ಯವಾಗಿ ಬೈದು, ಕೈಯಿಂದ ಕೆನ್ನೆಗೆ ಹಲ್ಲೆ ನಡೆಸಿ ನನ್ನನ್ನು ಹಾಗೂ ಮಗಳನ್ನು ಅಲ್ಲಿಯೇ ಬಿಟ್ಟು ಮಗನ ಜೊತೆ ಕಾರಲ್ಲಿ ಹೋಗಿದ್ದರು ಎಂದು ಆರೋಪಿಸಿ ಜಯಪ್ರಿಯ ಅವರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದೀಗ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ, ಹೇಮಲತಾ ಶೆಟ್ಟಿ, ಕು.ಹರ್ಷಿತಾ ವಾದಿಸಿದ್ದರು.

- Advertisement -

Latest News

error: Content is protected !!