Saturday, June 13, 2026
Homeಇತರಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ತೋಟಗಳಿಗೆ ಮತೊಮ್ಮೆ ಕಾಡಾನೆ ದಾಳಿ...! ಕೃಷಿಗೆ ಹಾನಿ...!

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ತೋಟಗಳಿಗೆ ಮತೊಮ್ಮೆ ಕಾಡಾನೆ ದಾಳಿ…! ಕೃಷಿಗೆ ಹಾನಿ…!

- Advertisement -
- Advertisement -

ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಮಠದ ಮಜಲು ಅನಂತ್‌ ರಾವ್‌ ಅವರ ತೋಟಕ್ಕೆ ಕಾಡಾನೆ ದಾಳಿ ಮಾಡಿದೆ. ಸೋಮವಾರ ತಡರಾತ್ರಿ ದಾಳಿ ನಡೆಸಿದ ಕಾಡಾನೆಗಳು 80 ಅಡಿಕೆ ಮರ, 5 ತೆಂಗಿನ ಮರ ಹಾಗೂ ಅನೇಕ ಬಾಳೆ ಗಿಡಗಳನ್ನು ನಾಶ ಮಾಡಿವೆ.

ಶನಿವಾರ ರಾತ್ರಿಯೂ ದಾಳಿ ನಡೆಸಿದ್ದ ಆನೆಗಳು 50 ಅಡಿಕೆ ಮರ, ಎರಡು ತೆಂಗು ಹಾಗೂ ಬಾಳೆಗಿಡಗಳನ್ನು ಧ್ವಂಸ ಮಾಡಿವೆ.

ಇದೀಗ ಮತ್ತೆ ಎರಡು ದಿನಗಳ ಬಳಿಕ ದಾಳಿ ಮುಂದುವರಿದಿದೆ. ಮೂರು ತಿಂಗಳ ಹಿಂದೆಯೂ ಅಪಾರ ಕೃಷಿ ನಾಶಕ್ಕೆ ಕಾರಣವಾಗಿತ್ತು.

ಮಂಗಳವಾರ ಹಾನಿ ಪ್ರಮಾಣ ಅಂದಾಜಿಸುವಾಗ ಮೂರರಿಂದ ಐದು ಆನೆಗಳು ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಅರಣ್ಯ ಇಲಾಖೆ ಸಿಬಂದಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!