Wednesday, June 3, 2026
Homeಕರಾವಳಿಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಡಿ ನೇಮಕ !

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಡಿ ನೇಮಕ !

- Advertisement -
- Advertisement -

ಕಾಂಗ್ರೆಸ್ ಪಕ್ಷದ ಬೆಳ್ತಂಗಡಿ ನಗರ ಸಮಿತಿ ಅಧ್ಯಕ್ಷರಾಗಿ ಜಗದೀಶ್ ಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ಧನ ಕುಲಾಲ್ ನೇಮಕಗೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ರವರು ಇವರನ್ನು ನೇಮಕಗೊಳಿಸಿ ಇಂದು ಆದೇಶ ನೀಡಿದ್ದಾರೆ.

ಇನ್ನುಳಿದಂತೆ ಬೆಳ್ತಂಗಡಿ ನಗರ ಸಮಿತಿ ಉಪಾಧ್ಯಕ್ಷರುಗಳಾಗಿ ರಾಜಶ್ರೀ ರಮಣ್, ವಿಶ್ವನಾಥ ಶೆಟ್ಟಿ ರಾಮ ನಗರ, ಜೆರ್ಮಿ ಡೇಸಾ ಕೋರ್ದಂಡ, ಮೈಕಲ್ ಲೋಬೊ ಕಲ್ಕಣಿ, ಸುಧಾಮಣಿ ಸಂಜಯನಗರ, ಖಜಾಂಚಿಯಾಗಿ ಫೆಡ್ರಿಕ್ ಪಿಂಟೊ, ಕಾರ್ಯದರ್ಶಿಗಳಾಗಿ ಹರೀಶ್ ಕೆಲ್ಲಗುತ್ತು, ಅಜೇಯ್ ಮಟ್ಲ, ಜನಾರ್ದನ ಸುಧೆಮುಗೇರು ಆಯ್ಕೆಗೊಂಡಿದ್ದಾರೆ. ಹಾಗೂ ಬೆಳ್ತಂಗಡಿ ನಗರ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಸಂಚಾಲಕರುಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹೀಗೆ ಬೇರೆ ಬೇರೆ ವಿಭಾಗಗಳಿಗೆ ಹಲವಾರು ಮಂದಿಯನ್ನು ಆಯ್ಕೆಮಾಡಲಾಗಿದೆ.

- Advertisement -

Latest News

error: Content is protected !!