Sunday, August 30, 2026
Homeಅಪರಾಧಪುತ್ತೂರು: ಪತಿಯ ಮಾತಿಗೆ ಸ್ಪಂದಿಸದ ಪತ್ನಿ; ಕೋಪಗೊಂಡ ಪತಿಯಿಂದ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ

ಪುತ್ತೂರು: ಪತಿಯ ಮಾತಿಗೆ ಸ್ಪಂದಿಸದ ಪತ್ನಿ; ಕೋಪಗೊಂಡ ಪತಿಯಿಂದ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ

- Advertisement -
- Advertisement -

ಪುತ್ತೂರು: ಪತ್ನಿ ತನ್ನ ಮಾತಿಗೆ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಕೋಪಗೊಂಡ ಪತಿ ತನ್ನ ಪತ್ನಿಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ ಘಟನೆ ಬನ್ನೂರು ಗ್ರಾಮದ ಕಜೆ ಸೇಡಿಯಾಪು ಎಂಬಲ್ಲಿ ನ.13ರಂದು ನಡೆದಿದೆ.

ಹಲ್ಲೆಗೊಳಗಾದವರನ್ನು ಬನ್ನೂರು ಗ್ರಾಮದ ಕಜೆ ಸೇಡಿಯಾಪು ನಿವಾಸಿ ದಾಮೋದರ ಅವರ ಪತ್ನಿ ಪವಿತ್ರ ಎನ್ನಲಾಗಿದೆ.
ಮುಂಜಾನೆ ಪವಿತ್ರ ಮನೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಪತಿ ದಾಮೋದರ ಅವರ ಬಳಿಗೆ ಬಂದು ‘ನಾನು ಸತ್ತು ಹೋದರೆ ನೀನೇನು ಮಾಡುವೆ?’ ಇಂದು ಕೇಳಿದ್ದರು, ಇದಕ್ಕೆ ಪತ್ನಿ ಪವಿತ್ರ ಯಾವುದೇ ಸ್ಪಂದನೆ ನೀಡದೆ ತಮ್ಮ ಪಾಡಿಗೆ ಕೆಲಸ ಮಾಡುತ್ತಿದ್ದ ಕಾರಣ ಕೋಪಕ್ಕೆ ಒಳಗಾಗ ದಾಮೋದರ್ ತನ್ನ ಪತ್ನಿಯ ಮೇಲೆ ಹಲ್ಲೆ ಎಸಗಿದ್ದಾರೆ. ಈ ಸಂದರ್ಬ ಪವಿತ್ರ ಜೋರಾಗಿ ಬೊಬ್ಬೆ ಹಾಕಿಕೊಂಡಾಗ ಮನೆಯವರೆಲ್ಲ ಸ್ಥಳಕ್ಕೆ ಬಂದು ದಾಮೋದರರನ್ನು ತಡೆದಿದ್ದಾರೆ. ಗಾಯಗೊಂಡ ಪವಿತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ.


ದಾಮೋದರ್ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಅದೇ ಚಿಂತೆಯಲ್ಲಿ ಪತ್ನಿ ಜೊತೆ ಮಾತನಾಡಿದಾಗ ಆಕೆ ಸರಿಯಾಗಿ ಮಾತನಾಡದೇ ಇದ್ದ ಕಾರಣ ಕೋಪಗೊಂಡು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!