Saturday, June 6, 2026
Homeಕರಾವಳಿಬಂಟ್ವಾಳ : ಕಾರಿಂಜ ಶಿವಕ್ಷೇತ್ರ ಪಾದರಕ್ಷೆ ಧರಿಸಿದ ಪ್ರಕರಣ; ಪೊಲೀಸರಿಂದ ಎಚ್ಚರಿಕೆ ಬ್ಯಾನರ್ !

ಬಂಟ್ವಾಳ : ಕಾರಿಂಜ ಶಿವಕ್ಷೇತ್ರ ಪಾದರಕ್ಷೆ ಧರಿಸಿದ ಪ್ರಕರಣ; ಪೊಲೀಸರಿಂದ ಎಚ್ಚರಿಕೆ ಬ್ಯಾನರ್ !

- Advertisement -
- Advertisement -

ದಕ್ಷಿಣಕನ್ನಡ : ದೇವಸ್ಥಾನಕ್ಕೆ ಧಕ್ಕೆ ತರುವ ಚಟುವಟಿಕೆಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದ್ದು ಈ ಬಗ್ಗೆ ಎಚ್ಚರಿಕೆಯ ಬ್ಯಾನರ್ ಒಂದನ್ನು ಪೊಲೀಸರುಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ಅಳವಡಿಸಿದ್ದಾರೆ.

ಕಾವಳಮೂಡೂರು ಗ್ರಾಮದ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ತರುವಂತಹ ಮದ್ಯಪಾನ,ಧೂಮಪಾನ ಅಥವಾ ಇನ್ನಾವುದೇ ಅನೈತಿಕ ಚಟುವಟಿಕೆಗಳನ್ನು ಮಾಡಬಾರದು.ಇಂತಹ ಚಟುವಟಿಕೆಗಳು ಪರಿಸರದಲ್ಲಿ ಕಂಡು ಬಂದಲ್ಲಿ ತುರ್ತು ಸ್ಪಂದನಾ ಸೇವೆ ನಂಬರ್ (ERSS): 112, ಪುಂಜಾಲಕಟ್ಟೆ ಪೊಲೀಸ್ ಠಾಣೆ 08256-279375, 8277986411 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದು ಪ್ರಕಟನೆಯ ಬ್ಯಾನರ್ ಅನ್ನು ಪೋಲೀಸರು ಕಾರಿಂಜ ದೇವಾಲಯದ ಪರಿಸರದಲ್ಲಿ ಪ್ರಕಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ದೇವಾಲಯದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡಿದ ಅನೇಕ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಕ್ರಮದ ಮೂಲಕ ಎಚ್ಚರಿಕೆ ನೀಡಿದೆ

- Advertisement -

Latest News

error: Content is protected !!