Sunday, June 7, 2026
Homeಅಪರಾಧಸುಳ್ಯ: ಪ್ರವಾದಿ ನಿಂದನೆಗೈದವನ ಬಂಧನಕ್ಕೆ ಎಸ್‌ಡಿಪಿಐ ಒತ್ತಾಯ!

ಸುಳ್ಯ: ಪ್ರವಾದಿ ನಿಂದನೆಗೈದವನ ಬಂಧನಕ್ಕೆ ಎಸ್‌ಡಿಪಿಐ ಒತ್ತಾಯ!

- Advertisement -
- Advertisement -

ಸುಳ್ಯ: ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಆಶ್ಲೀಲ ಪದಗಳಿಂದ‌ ನಿಂದಿಸಿ‌ ಕೋಟ್ಯಾಂತರ ಜನರ‌ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಜಗದೀಶ ಐವರ್ನಾಡುವಿನ ಮೇಲೆ ಜಿಲ್ಲಾ ಪೋಲಿಸರು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರವಾದಿವರವರ ವಿರುದ್ಧ ಜಗದೀಶ ಐವರ್ನಾಡು ಎಂಬಾತ ಆಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಜಿಲ್ಲಾ ಪೋಲಿಸರು ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಬೇಕು,ಸಮಾಜದ ಶಾಂತಿಯನ್ನು ಕದಡಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಮೃದು ಧೋರಣೆ ತಾಳದೆ ಕಠಿಣ ಕಾನೂನು ಕ್ರಮ ಕೈಗೊಂಡು ಅಶಾಂತಿಯನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ ಹಾಗೂ ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಇಕ್ಬಾಲ್ ಬೆಳ್ಳಾರೆ ತಿಳಿಸಿದ್ದಾರೆ

- Advertisement -

Latest News

error: Content is protected !!