- Advertisement -
- Advertisement -
ಕಾರ್ಕಳ : ಹಿರ್ಗಾನ ರಾಜ್ಯ ಹೆದ್ದಾರಿಯಲ್ಲಿ ಬಿಇಯಂ ವಿದ್ಯಾ ಸಂಸ್ಥೆಯ ಸಮೀಪದಲ್ಲಿ ಎರಡು ಕಾರುಗಳು ಡಿಕ್ಕಿಯಾದ ಘಟನೆ ನಡೆದಿದೆ.
ಘಟನೆಯಲ್ಲಿ ಗಾಯಗೊಂಡವರನ್ನು ವಿಶ್ವನಾಥ(60), ಮಲ್ಲಿಕಾರ್ಜುನ(70), ಸಿದ್ಧೇಶಪ್ಪ(60), ಅರುಣಾ(40) ಎಂದು ಗುರುತಿಸಲಾಗಿದೆ. ಮಂಗಳೂರು ಕಡೆಯಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಸ್ಯಾಟ್ರೋ ಕಾರು ಹಾಗೂ ಹೆಬ್ರಿಯಿಂದ ಮಿಯ್ಯಾರು ಕಡೆಗೆ ಬರುತ್ತಿದ್ದ ಮಾರುತಿ ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದಿತ್ತು. ಭದ್ರಾವತಿ ಕಡೆಗೆ ಪ್ರಯಾಣಿಸುತ್ತಿದ್ದ ನಾಲ್ವರು ಘಟನೆಯಲ್ಲಿ ಗಾಯಗೊಂಡು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
- Advertisement -