Friday, June 5, 2026
Homeಕರಾವಳಿಜಾತಿಯನ್ನು ಮೆಟ್ಟಿ ನಿಂತ ಪ್ರೀತಿ: ಖರ್ಗೆ ಮೊಮ್ಮಗಳನ್ನು ವರಿಸಿದ ಬಂಟ್ವಾಳದ ಹವ್ಯಕ ಬ್ರಾಹ್ಮಣ ಯುವಕ

ಜಾತಿಯನ್ನು ಮೆಟ್ಟಿ ನಿಂತ ಪ್ರೀತಿ: ಖರ್ಗೆ ಮೊಮ್ಮಗಳನ್ನು ವರಿಸಿದ ಬಂಟ್ವಾಳದ ಹವ್ಯಕ ಬ್ರಾಹ್ಮಣ ಯುವಕ

- Advertisement -
- Advertisement -

ಬಂಟ್ವಾಳ: ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೊಮ್ಮಗಳು ಬಂಟ್ವಾಳ ವೀರಕಂಬ ಮೂಲದ ಹವ್ಯಕ ಬ್ರಾಹ್ಮಣ ಯುವಕನನ್ನು ವರಿಸಿದ್ದು ಬೆಂಗಳೂರು ಅರಮನೆ ಸಭಾಂಗಣದಲ್ಲಿ ಅದ್ದೂರಿ ವಿವಾಹ ನಡೆದಿದೆ.

ವೀರಕಂಬ ಗ್ರಾಮದ ಗಿಳ್ಕಿಂಜದ ಎ.ಟಿ ಹರಿಶಂಕರ – ವಿಜಯಲಕ್ಷ್ಮಿ ಅವರ ಪುತ್ರ ಪಾಣಿನಿ ಭಟ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರಿ ಜಯಶ್ರೀ ಹಾಗೂ ರಾಧಾಕೃಷ್ಣ ಅವರ ಪುತ್ರಿ ಪ್ರಾರ್ಥನ ಅವರನ್ನು ಮದುವೆಯಾಗಿದ್ದಾರೆ .

ಪ್ರಾರ್ಥನಾ ಮತ್ತು ಪಾಣಿನಿ ಭಟ್‌ ಇಬ್ಬರೂ ಕೂಡಾ ನ್ಯಾಯವಾದಿಗಳಾಗಿದ್ದು, ಸಂಸ್ಥೆಯೊಂದರಲ್ಲಿ ಕೆಲಸಕ್ಕಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಯ ವಿಷಯವನ್ನು ಎರಡೂ ಕುಟುಂಬಗಳಿಗೆ ತಿಳಿಸಿ, ಎರಡೂ ಕುಟು೦ಬಗಳ ಸಮೃತಿಯಿ೦ದ ಅದ್ಧೂರಿಯಿಂದ ಮದುವೆ ಕಾರ್ಯಜರುಗಿದೆ.ಸಮಾರಂಭದಲ್ಲಿ ರಾಷ್ಟ್ರ ರಾಜ್ಯದ ಗಣ್ಯರು ಪಾಲ್ಗೊಂಡಿದ್ದರು.

- Advertisement -

Latest News

error: Content is protected !!