Monday, June 8, 2026
Homeಅಪರಾಧಮಂಗಳೂರು: ಹಾಡುಹಗಲೇ ವ್ಯಕ್ತಿಯೋರ್ವರಿಗೆ ಚೂರಿ ಇರಿತ, ವೈಯಕ್ತಿಕ ದ್ವೇಷದಿಂದಾಗಿ ಕೃತ್ಯ

ಮಂಗಳೂರು: ಹಾಡುಹಗಲೇ ವ್ಯಕ್ತಿಯೋರ್ವರಿಗೆ ಚೂರಿ ಇರಿತ, ವೈಯಕ್ತಿಕ ದ್ವೇಷದಿಂದಾಗಿ ಕೃತ್ಯ

- Advertisement -
- Advertisement -

ಉಳ್ಳಾಲ: ಅಕ್ರಮ ಚಟುವಟಿಕೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯೊಬ್ಬರಿಗೆ ಸಿಯಾಳ ಕೆತ್ತುವ ಕತ್ತಿ ಮತ್ತು ಚೂರಿ ಇರಿದ ಘಟನೆ ಛೋಟಾ ಮಂಗಳೂರು ರಸ್ತೆಯಲ್ಲಿ ಇಂದು ಸಂಜೆ ವೇಳೆ ನಡೆದಿದೆ.

ಗ್ಯಾಸ್ ರಿಪೇರಿ ಅಂಗಡಿ ಮಾಲೀಕ ಹರೀಶ್ ಗಾಣಿಗ(42) ಎಂಬವವರು ಚೂರಿ ಇರಿತಕ್ಕೆ ಒಳಗಾದವರು. ಮೊಗವೀರಪಟ್ನ ನಿವಾಸಿ ಹಾಗು ಗಾಂಜಾ ವ್ಯಸನಿ ವಿಶಾಲ್ ಎಂಬಾತನಿಂದ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಸ್ಥಳೀಯ ಗಾಂಜಾ ಮಾಫಿಯಾದ ವಿರುದ್ಧ ಪದೇ ಪದೇ ಪೊಲೀಸರಿಗೆ ದೂರು ನೀಡುತ್ತಿದ್ದ ಕರಾಟೆ ಮಾಸ್ಟರ್ ಹರೀಶ್ ಗಾಣಿಗರ ಮೇಲಿನ ದ್ವೇಷದಿಂದ ನಡೆದಿರುವ ಕೃತ್ಯ ಎಂದು ಶಂಕಿಸಲಾಗಿದೆ. ಸದ್ಯ ವಿಶಾಲ್ ಗಾಗಿ ಹುಡುಕಾಟ ನಡೆಯುತ್ತಿದೆ.

ಉಳ್ಳಾಲ ಪೊಲೀಸರು ಗಾಯಾಳುವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!