Saturday, June 6, 2026
Homeಕರಾವಳಿಪುತ್ತೂರು: ಕಬ್ಬು ಕೊಡಿಸುವುದಾಗಿ ಹೇಳಿ ಯುವಕನ ಮೇಲೆ ಅತ್ಯಾಚಾರ; ಆರೋಪಿ ಅರೆಸ್ಟ್!

ಪುತ್ತೂರು: ಕಬ್ಬು ಕೊಡಿಸುವುದಾಗಿ ಹೇಳಿ ಯುವಕನ ಮೇಲೆ ಅತ್ಯಾಚಾರ; ಆರೋಪಿ ಅರೆಸ್ಟ್!

- Advertisement -
- Advertisement -

ಪುತ್ತೂರು: ಕಬಕ ಗ್ರಾಮದ ಮುರ ರೈಲ್ವೇ ಕ್ರಾಸ್ ಬಳಿ 20 ವರ್ಷದ ಎಂಡೋಪೀಡಿತ ಯುವಕನಿಗೆ ಕಬ್ಬು ಕೊಡಿಸುವುದಾಗಿ ಹೇಳಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಆರೋಪಿ ಮಹಮ್ಮದ್ ಹನೀಫ್ ಕಬ್ಬು ನೀಡುವ ನೆಪದಲ್ಲಿ ಮುರ ರೈಲ್ವೇ ಕ್ರಾಸ್ ಹತ್ತಿರ ಕರೆದುಕೊಂಡು ಹೋಗಿ ಈ ಕೃತ್ಯ ಎಸಗಿದ್ದಾನೆ. 20 ವರುಷದ ಯುವಕನೋರ್ವನ ಮೇಲೆ ಬಲಾತ್ಕಾರ ಮಾಡಿ ಅತ್ಯಾಚಾರ ನಡೆಸಿರುವುದಾಗಿ ತಿಳಿದು ಬಂದಿದೆ. ಇನ್ನು ಯುವಕ‌ ನಿರಾಕರಿಸಿದ ಸಂದರ್ಭದಲ್ಲಿ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಿದ್ದಲ್ಲದೆ,ಈ ವಿಚಾರವನ್ನು ಮನೆಯವರಿಗೆ ತಿಳಿಸಿದರೆ ಕೊಲೆ ಮಾಡುವ ಬೆದರಿಕೆ ಒಡ್ಡಿದ್ದಾನೆ.

ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರದ ಪ್ರಕರಣಗಳು ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ಇದಕ್ಕೆ ವಿರುದ್ಧವಾಗಿ ವ್ಯಕ್ತಿಯೋರ್ವ ತನ್ನದೇ ಲಿಂಗಕ್ಕೆ ಸೇರುವವರ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ಇದೀಗ ಆತಂಕವನ್ನು ಉಂಟುಮಾಡುವಂತಿದೆ. ಘಟನೆಗೆ ಸಂಬಂಧಿಸಿ ಯುವಕನ ತಂದೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಡಿದ್ದು,ಘಟನೆ ಸಂಬಂಧ ಆರೋಪಿ ಮಹಮ್ಮದ್ ಹನೀಫ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!