Saturday, August 22, 2026
Homeಕರಾವಳಿಉಡುಪಿಕುಂದಾಪುರ : ಮುಗುಚಿ ಬಿದ್ದ ಮೀನುಗಾರಿಕಾ ದೋಣಿ; ಇಬ್ಬರು ನಾಪತ್ತೆ!

ಕುಂದಾಪುರ : ಮುಗುಚಿ ಬಿದ್ದ ಮೀನುಗಾರಿಕಾ ದೋಣಿ; ಇಬ್ಬರು ನಾಪತ್ತೆ!

- Advertisement -
- Advertisement -

ಕುಂದಾಪುರ : ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದದ ತಾರಾಪತಿ ಸಮುದ್ರ ತೀರದಲ್ಲಿ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಮುಗುಚಿ ಬಿದ್ದ ಪರಿಣಾಮ ಇಬ್ಬರು ನಾಪತ್ತೆಯಾದ ಘಟನೆ ಶುಕ್ರವಾರ ಸಂಜೆಯ ಸುಮಾರಿಗೆ ನಡೆದಿದೆ.

ನಾಪತ್ತೆಯಾದ ಮೀನುಗಾರರು ಶರಣ್ ( 25 ) ಮತ್ತು ಅಣ್ಣಪ್ಪ (30) ಎಂದು ತಿಳಿದು ಬಂದಿದೆ. ಚರಣ ಖಾರ್ವಿ ಮಾಲಿಕತ್ವದ ಜೈ ಗುರುಜಿ ನಾಡ ದೋಣಿ ತೆರೆಯ ಹೊಡೆತಕ್ಕೆ ಸಿಕ್ಕಿ ಮಗುಚಿ ಬಿದ್ದಿದೆ ಎಂದು ಹೇಳಲಾಗಿದೆ.

ದೋಣಿಯಲ್ಲಿದ್ದ ಇತರೆ ನಾಲ್ಕೈದು‌ ಮೀನುಗಾರರು ಬೇರೆ ನಾಡ ದೋಣಿ ಸಹಾಯದಿಂದ ದಡ ಸೇರದ್ದಾರೆ. ಬೈಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೀನುಗಾರರು, ಮುಳುಗು ತಜ್ಞರು ಕಾಣೆಯಾದವರ ಹುಡುಕಾಟದಲ್ಲಿ ತಡರಾತ್ರಿ ತನಕ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.

- Advertisement -

Latest News

error: Content is protected !!