- Advertisement -
![]()
- Advertisement -
ಕಡಬ: ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳ ಕಿರಿಕಿರಿಗೆ ಸಾರ್ವಜನಿಕರು ಬೀದಿಯಲ್ಲಿರುವ ಆಡಿನ ಕತ್ತಿಗೆ ಪ್ಲೇಕಾರ್ಡ್ ಕಟ್ಟಿರುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಡಬ ಪೇಟೆಯಲ್ಲಿ ಸಾಕುಪ್ರಾಣಿಗಳು ರಸ್ತೆಯಲ್ಲೇ ಅಡ್ಡಾಡುವುದರಿಂದಾಗಿ ಅದೆಷ್ಟೋ ಅಪಘಾತಗಳು ಸಂಭವಿಸಿ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಆದರೆ ಇದೀಗ ಆಡುಗಳನ್ನು ರಸ್ತೆಗೆ ಬಿಡುವವರಿಗೆ ಸಾರ್ವಜನಿಕರೇ ಎಚ್ಚರಿಕೆ ನೀಡಲಾರಂಭಿಸಿದ್ದು, ಗತಿ ಇಲ್ಲದವರು ನನ್ನನ್ನು ಸಾಕಬೇಡಿ, ದಯಮಾಡಿ ಬೈಕ್ ಸವಾರರ ಸಾವಿಗೆ ನನ್ನನ್ನು ಕಾರಣ ಮಾಡಬೇಡಿ ಎಂದು ಬರೆದ ಪ್ಲೇಕಾರ್ಡ್ ತೂಗು ಹಾಕಲಾಗಿದೆ.
- Advertisement -


