Thursday, June 4, 2026
Homeಕರಾವಳಿಕಾಸರಗೋಡುಕಾಸರಗೋಡು: ನೇಣು ಬಿಗಿದ ಸ್ಥಿತಿಯಲ್ಲಿ ಗ್ರಹಿಣಿಯೋರ್ವಳ ಶವ ಪತ್ತೆ...! ಪತಿಯ ಕಿರುಕುಳವೇ ಪತ್ನಿಯ ಸಾವಿಗೆ ಕಾರಣವಾಯಿತಾ...?

ಕಾಸರಗೋಡು: ನೇಣು ಬಿಗಿದ ಸ್ಥಿತಿಯಲ್ಲಿ ಗ್ರಹಿಣಿಯೋರ್ವಳ ಶವ ಪತ್ತೆ…! ಪತಿಯ ಕಿರುಕುಳವೇ ಪತ್ನಿಯ ಸಾವಿಗೆ ಕಾರಣವಾಯಿತಾ…?

- Advertisement -
- Advertisement -

ಕಾಸರಗೋಡು: ನೇಣು ಬಿಗಿದ ಸ್ಥಿತಿಯಲ್ಲಿ ಗ್ರಹಿಣಿಯೋರ್ವಳ ಶವ ಪತ್ತೆಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಕಲಿಯೋಟ್ ನಲ್ಲಿ ನಡೆದಿದೆ. ಮೃತ ಕಲಿಯೋಟ್ ತಕ್ಕೇಕರೆಯ ಮಹೇಶ್ ರವರ ಪತ್ನಿ ಅನು ಆಂಟನಿ (22) ಎನ್ನಲಾಗಿದೆ.

ಎರಡು ವರ್ಷಗಳ ಹಿಂದೆ ಕೊಟ್ಟಾಯಂ ನಿವಾಸಿಯಾಗಿದ್ದ ಅನು ಮಹೇಶ್ ಪ್ರೀತಿಸಿ ವಿವಾಹವಾಗಿದ್ದರು. ವಿವಾಹದ ಬಳಿಕ ಅನು ಮನೆಯವರೊಂದಿಗೆ ಬಾಂಧವ್ಯ ಉತ್ತಮವಾಗಿರಲಿಲ್ಲ. ಅಲ್ಲದೇ ಅನು ಮತ್ತು ಮಹೇಶ್ ನಡುವೆಯೂ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ಮನೆಯ ಕೋಣೆಯಲ್ಲಿ ಅನು ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮಹೇಶ್ ಆಗಾಗ ಅನುವಿಗೆ ಕಿರುಕುಳ ನೀಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿದುಬಂದಿದೆ. ಸದ್ಯ ಮಹೇಶ್ ನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮೃತದೇಹವನ್ನು ಕಾಸರಗೋಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!