Thursday, June 4, 2026
Homeಅಪರಾಧಪುತ್ತೂರು:19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು!

ಪುತ್ತೂರು:19 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು!

- Advertisement -
- Advertisement -

ಪುತ್ತೂರು: ಬರೋಬ್ಬರಿ 19 ವರ್ಷಗಳ ನಂತರ ಖೋಟಾ ನೋಟು ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಘಟನೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ನಡೆದಿದೆ.

ಆರೋಪಿ ಕಾಸರಗೋಡು ಮೂಲದ ಬೋವಿಕ್ಕಾನ ನಿವಾಸಿ ಸಿದ್ದಿಕ್ (41) ಎಂದು ಹೇಳಲಾಗಿದೆ. ಆರೋಪಿಯ ಪತ್ತೆಗಾಗಿ ಡಾ|ಗಾನಾ ಪಿ. ಕುಮಾರ್, ಪೊಲೀಸ್ ಉಪಾಧೀಕ್ಷಕರು ಪುತ್ತೂರು ಉಪ ವಿಭಾಗದವರು ಹಾಗೂ ಉಮೇಶ್ ಉಪ್ಪಳಿಕೆ, ವೃತ್ತ ನಿರೀಕ್ಷಕರು, ಪುತ್ತೂರು ಗ್ರಾಮಾಂತರ ಅವರ ಮಾರ್ಗದರ್ಶನದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಉದಯರವಿ ಎಂ. ವೈ ರವರು ಸಿಬ್ಬಂದಿಗಳಾದ ಅದ್ರಾಮ ಮತ್ತು ಪ್ರವೀಣ್ ರೈ ರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Latest News

error: Content is protected !!