Monday, October 19, 2026
Homeಪ್ರಮುಖ-ಸುದ್ದಿರೈಲು ಪ್ರಯಾಣಿಕರೇ ಎಚ್ಚರ!; ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ವಿಡಿಯೋ ಮತ್ತು ರೀಲ್ಸ್ ವೀಕ್ಷಿಸಿದರೆ 5,000...

ರೈಲು ಪ್ರಯಾಣಿಕರೇ ಎಚ್ಚರ!; ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ವಿಡಿಯೋ ಮತ್ತು ರೀಲ್ಸ್ ವೀಕ್ಷಿಸಿದರೆ 5,000 ದಂಡ, ಜೈಲು ಶಿಕ್ಷೆ ಪ್ರಕಟ

- Advertisement -
- Advertisement -

ಬೆಂಗಳೂರು: ರೈಲು ಪ್ರಯಾಣದ ವೇಳೆ ಇಯರ್‌ಫೋನ್ ಬಳಸದೆ ಮೊಬೈಲ್‌ನಲ್ಲಿ ಜೋರಾಗಿ ಹಾಡು ಕೇಳುವುದು, ವಿಡಿಯೋ ಮತ್ತು ರೀಲ್ಸ್ ವೀಕ್ಷಿಸುವುದು ಹಾಗೂ ಜೋರಾಗಿ ಮಾತನಾಡುವುವ ವರ್ತನೆಯಿಂದ ಇತರ ಪ್ರಯಾಣಿಕರಿಗೆ ತೊಂದರೆಯಾದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಜನ್ ವಿಶ್ವಾಸ್ ಕಾಯ್ದೆಯಡಿ ರೈಲ್ವೆ ಕಾಯ್ದೆಯ ಸೆಕ್ಷನ್ 145(2)(ಎ) ಪ್ರಕಾರ, ರೈಲಿನಲ್ಲಿ ಇತರರಿಗೆ ಕಿರಿಕಿರಿ ಉಂಟುಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬಹುದು. ರೈಲ್ವೆ ಅಧಿಕಾರಿಗಳ ಎಚ್ಚರಿಕೆಯ ನಂತರವೂ ನಿಯಮ ಉಲ್ಲಂಘಿಸಿದರೆ, ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ₹5,000ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ವರದಿಯಾಗಿದೆ.

ರೈಲುಗಳಲ್ಲಿ ಮೊಬೈಲ್‌ನಲ್ಲಿ ಜೋರಾಗಿ ಸಿನಿಮಾ, ಹಾಡು ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್ ವೀಕ್ಷಿಸುವುದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನಿಯಮ ಪಾಲನೆಯ ಮೇಲ್ವಿಚಾರಣೆ ನಡೆಸಲು ಟಿಕೆಟ್ ಪರೀಕ್ಷಕರು ಹಾಗೂ ರೈಲ್ವೆ ಸಿಬ್ಬಂದಿಗೂ ಸೂಚನೆ ನೀಡಲಾಗಿದೆ.

ಪ್ರಯಾಣಿಕರು ಮೊಬೈಲ್‌ನಲ್ಲಿ ಆಡಿಯೋ ಕೇಳುವಾಗ ಇಯರ್‌ಫೋನ್ ಬಳಸಬೇಕು. ಕರೆಗಳನ್ನು ಕಡಿಮೆ ಧ್ವನಿಯಲ್ಲಿ ಮಾತನಾಡುವ ಮೂಲಕ ಇತರರಿಗೆ ತೊಂದರೆಯಾಗದಂತೆ ಸಹಕರಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

- Advertisement -

Latest News

error: Content is protected !!