Tuesday, June 9, 2026
Homeಇತರಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಗೆ 10 ಲಕ್ಷ ರೂ ನೀಡಿ ಮಾನವೀಯತೆ ಮೆರೆದ ದೀಪಿಕಾ ಪಡುಕೋಣೆ...!

ಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಗೆ 10 ಲಕ್ಷ ರೂ ನೀಡಿ ಮಾನವೀಯತೆ ಮೆರೆದ ದೀಪಿಕಾ ಪಡುಕೋಣೆ…!

- Advertisement -
- Advertisement -

ಆಸಿಡ್ ದಾಳಿಗೆ ಒಳಗಾಗಿದ್ದ ಮಹಿಳೆಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 10 ಲಕ್ಷ ರೂ. ನೀಡಿ ಮಾನವೀಯತೆ ಮೆರೆದಿದ್ದಾರೆ.

ಆಸಿಡ್ ದಾಳಿಗೆ ಒಳಗಾಗಿದ್ದ 25 ವರ್ಷದ ಸಂತ್ರಸ್ತೆ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ದೀಪಿಕಾ ಪಡುಕೋಣೆ ನೆರವು ನೀಡಿದ್ದಾರೆ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸಂತ್ರಸ್ತೆ ದೆಹಲಿ ಸ್ಫ್ದರ್ ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಿಡ್ನಿ ಕಸಿ ಮಾಡಲು 16 ಲಕ್ಷ ರೂಪಾಯಿ ಅಗತ್ಯವಾಗಿದೆ.

ಅವರ ಚಿಕಿತ್ಸೆ ನೆರವಿಗಾಗಿ ಅಭಿಯಾನ ಕೈಗೊಂಡಿದ್ದು, ಅನೇಕರು ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ದೀಪಿಕಾ ಪಡುಕೋಣೆ 10 ಲಕ್ಷ ರೂಪಾಯಿ ನೀಡಿದ್ದಾರೆ. ಬಿಜ್ನೋರ್ ನಿವಾಸಿಯಾಗಿರುವ ಸಂತ್ರಸ್ತೆ ಬಾಲಾ ಅವರು ದೀಪಿಕಾ ಪಡುಕೋಣೆ ಅವರೊಂದಿಗೆ ‘ಚಪಾಕ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ.

- Advertisement -

Latest News

error: Content is protected !!