Sunday, June 7, 2026
Homeತಾಜಾ ಸುದ್ದಿರಾಜ್ಯ ಹೈಕೋರ್ಟ್‌ ಸಿಜೆ ಸೇರಿದಂತೆ 9 ಮಂದಿ ಸುಪ್ರೀಂಗೆ : 2027ಕ್ಕೆ ನ್ಯಾ| ನಾಗರತ್ನಾ ಮೊದಲ...

ರಾಜ್ಯ ಹೈಕೋರ್ಟ್‌ ಸಿಜೆ ಸೇರಿದಂತೆ 9 ಮಂದಿ ಸುಪ್ರೀಂಗೆ : 2027ಕ್ಕೆ ನ್ಯಾ| ನಾಗರತ್ನಾ ಮೊದಲ ಮಹಿಳಾ ಸಿಜೆಐ!

- Advertisement -
- Advertisement -

ನವದೆಹಲಿ: ಸುಪ್ರೀಂ ಕೋರ್ಟ್‌ಗೆ ಒಂಬತ್ತು ಹೊಸ ನ್ಯಾಯಮೂರ್ತಿಗಳನ್ನು ಗುರುವಾರ ನೇಮಕ ಮಾಡಲಾಗಿದೆ. ಕರ್ನಾಟಕದವರಾದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಸೇರಿ ಮೂವರು ಮಹಿಳೆಯರು ಈ ಪಟ್ಟಿಯಲ್ಲಿ ಇದ್ದಾರೆ. ಈ ತಂಡದಲ್ಲಿ ನೇಮಕವಾದವರಲ್ಲಿ ಮೂವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೇರುವ ಸಾಧ್ಯತೆ ಹೊಂದಿದ್ದಾರೆ. ನಾಗರತ್ನಾ ಅವರಿಗೂ ಈ ಅವಕಾಶ ಇದೆ. ಅವರು ಈ ಹುದ್ದೆಗೆ ಏರಿದರೆ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಹಿರಿಮೆಗೆ ಪಾತ್ರರಾಗಲಿದ್ದಾರೆ.


ಅವರ ಜತೆಗೆ ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಒಕಾ ಕೂಡ ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದಿದ್ದಾರೆ.
ಮೂವರು ಮಹಿಳಾ ನ್ಯಾಯಮೂರ್ತಿಗಳ ಸಹಿತ ಒಟ್ಟು ಒಂಭತ್ತು ಮಂದಿ ನ್ಯಾಯಮೂರ್ತಿಗಳನ್ನು ಸುಪ್ರೀಂಕೋರ್ಟ್‌ಗೆ ಪದೋನ್ನತಿ ನೀಡುವ ಕೊಲೀಜಿಯಂ ಶಿಫಾರಸಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಗುರುವಾರ ಅಂಕಿತ ಹಾಕಿದ್ದಾರೆ.


ಆ. 17ರಂದು ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ಕೊಲೀಜಿಯಂ ಹೆಸರುಗಳನ್ನು ಅಂತಿಮ ಪಡಿಸಿತ್ತು.

- Advertisement -

Latest News

error: Content is protected !!