Tuesday, July 1, 2025
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ!

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ!

spot_img
- Advertisement -
- Advertisement -

ಧರ್ಮಸ್ಥಳ: ಬಿಗ್‌ಬಾಸ್ ಸೀಸನ್-8 ರಿಯಾಲಿಟಿ ಶೋ ವಿಜೇತರಾದ ಮಂಜು ಪಾವಗಡರವರು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದಿದ್ದು,ಈ ಸಂದರ್ಭದಲ್ಲಿ ಮಂಜು ಪಾವಗಡ ರವರ ತಂದೆ, ತಾಯಿ, ಕುಟುಂಬವರ್ಗದವರು ಉಪಸ್ಥಿತರಿದ್ದರು.

ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಗ, ನನಗೆ ಜೀವನ ಕೊಟ್ಟಿದ್ದು ಮಂಜುನಾಥ ಸ್ವಾಮಿ ಎಂದು ಒಂದು ಘಟನೆಯನ್ನು ಮಂಜು ಬಿಗ್‍ಬಾಸ್ ಮನೆಯಲ್ಲಿ ನೆನೆದು ಭಾವುಕರಾಗಿದ್ದರು. ಕಷ್ಟ-ಸುಖ-ಸಂತೋಷ ಯಾವುದೇ ಇರಲಿ ಅಲ್ಲಿಗೆ ಹೋಗಿ ಆಶೀರ್ವಾದ ಬೇಡಿಕೊಂಡು ಬರುತ್ತೇನೆಂದು ಹೇಳಿದ್ದರು. ಈ ಹಿನ್ನೆಲೆ ಮಂಜು ಪಾವಗಡ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -
spot_img

Latest News

error: Content is protected !!