Tuesday, June 9, 2026
Homeತಾಜಾ ಸುದ್ದಿಕಲ್ಯಾಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು : ಯುಪಿಯಲ್ಲಿ 3 ದಿನ ಶೋಕಾಚರಣೆ

ಕಲ್ಯಾಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು : ಯುಪಿಯಲ್ಲಿ 3 ದಿನ ಶೋಕಾಚರಣೆ

- Advertisement -
- Advertisement -

ಲಕ್ನೋ ; ಯುಪಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಯೋಗಿ ಆದಿತ್ಯನಾಥ್ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ತುಂಬಾ ದುಃಖವಾಗಿದೆ. ಕಲ್ಯಾಣ್ ಸಿಂಗ್ ಜಿ … ರಾಜನೀತಿಜ್ಞ, ಹಿರಿಯ ಆಡಳಿತಗಾರ, ತಳಮಟ್ಟದ ನಾಯಕ ಮತ್ತು ಮಹಾನ್ ಮಾನವ. ಉತ್ತರ ಪ್ರದೇಶದ ಅಭಿವೃದ್ಧಿಗೆ ಅವರ ಕೊಡಿಗೆ ಅಪಾರ. ಅವರ ಪುತ್ರ ರಾಜವೀರ್ ಸಿಂಗ್ ಅವರನ್ನು ಮಾತನಾಡಿಸಿ ಸಾಂತ್ವನ ಹೇಳಿರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಲ್ಯಾಣ್ ಸಿಂಗ್ ನಿಧನಕ್ಕೆ ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಅವರ ಅಂತಿಮ ಸಂಸ್ಕಾರವನ್ನು ಆಗಸ್ಟ್ 23ರ ಸಂಜೆ ನರೋರಾದ ಗಂಗಾ ತೀರದಲ್ಲಿ ನೆರವೇರಿಸಲಾಗುತ್ತದೆ. ಆಗಸ್ಟ್ 23 ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

- Advertisement -

Latest News

error: Content is protected !!