Monday, June 8, 2026
Homeಕೊಡಗುಒಲಿಂಪಿಕ್ಸ್‌ ಮಹಿಳಾ ಹಾಕಿ ಕೋಚ್ ಕೊಡಗಿನ ಅಂಕಿತಾಗೆ ರಾಜ್ಯಪಾಲರ ಪ್ರೋತ್ಸಾಹ ಧನ ಘೋಷಣೆ

ಒಲಿಂಪಿಕ್ಸ್‌ ಮಹಿಳಾ ಹಾಕಿ ಕೋಚ್ ಕೊಡಗಿನ ಅಂಕಿತಾಗೆ ರಾಜ್ಯಪಾಲರ ಪ್ರೋತ್ಸಾಹ ಧನ ಘೋಷಣೆ

- Advertisement -
- Advertisement -

ಬೆಂಗಳೂರು: ಜಪಾನ್ ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಸೀನಿಯರ್ ಮಹಿಳಾ ಹಾಕಿ ತಂಡದ ಕೋಚ್ ಆಗಿ ಭಾರತವನ್ನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯ ಅಂಕಿತಾ ಸುರೇಶ್ ಅವರಿಗೆ ರಾಜ್ಯಪಾಲರಿಂದ ಪ್ರೋತ್ಸಾಹ ಧನ ಘೋಷಣೆಯಾಗಿದೆ.

ಕ್ರೀಡಾ ತರಬೇತುದಾರರಾಗಿದ್ದ ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಅಂಕಿತಾ ಅವರಿಗೆ ಒಂದು ಲಕ್ಷ ರೂಪಾಯಿ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ. ಅಂಕಿತಾ ಸುರೇಶ್ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯವರು ಮತ್ತು ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಅವರ ಪತ್ನಿ.

ಶೀಘ್ರದಲ್ಲೇ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಅಂಕಿತಾ ಸುರೇಶ್ ಅವರನ್ನು ರಾಜ್ಯಪಾಲರು ಸನ್ಮಾನಿಸಲಿದ್ದಾರೆ‌.

ಅಂಕಿತಾ ಸುರೇಶ್ ಜೊತೆಗೆ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜ್ಯದ ಮೂವರು ಕ್ರೀಡಾಪಟುಗಳಿಗೆ ಕೂಡಾ ತಲಾ ಒಂದು ಲಕ್ಷ ರೂಪಾಯಿ ರಾಜ್ಯಪಾಲರ ಪ್ರೋತ್ಸಾಹ ಧನ ಘೋಷಣೆಯಾಗಿದೆ.

- Advertisement -

Latest News

error: Content is protected !!