Thursday, June 4, 2026
Homeಅಪರಾಧಬೆಳ್ತಂಗಡಿ: ಯುವಕನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಪೊಲೀಸ್ ದೂರು ದಾಖಲು

ಬೆಳ್ತಂಗಡಿ: ಯುವಕನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ, ಪೊಲೀಸ್ ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ : ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಬೆಳ್ತಂಗಡಿ ತಾಲೂಕಿನ ಯುವಕನ‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಅವಹೇಳನಕಾರಿಯಾಗಿ ಅಪಪ್ರಚಾರ ಮಾಡಿರುವ ಆರೋಪ ಕೇಳಿಬಂದಿದೆ.‌

ಲಾಯಿಲ ಗ್ರಾಮದ ಸುಶಾನ್ ಚಂದ್ರ(26) ಎಂಬ ಯುವಕನ ಬಗ್ಗೆ ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಟೋ ಜೊತೆಗೆ ಸುಳ್ಳು ಪೋಸ್ಟ್ ಕ್ರಿಯೇಟ್ ಮಾಡಿ ಹರಿಯಬಿಡಲಾಗಿದೆ ಎಂದು ದೂರು ದಾಖಲಿಸಲಾಗಿದೆ‌. ಅಲ್ಲದೇ ಮನೆ ಮಂದಿಗೆ ಬೆದರಿಕೆ ಕರೆ ಕೂಡಾ ಬರುತ್ತಿರುವುದರಿಂದ ನೊಂದ ಯುವಕ ವಾಟ್ಸಪ್ ಸ್ರ್ಕೀನ್ ಶಾಪ್ ಸಮೇತ ಬೆಳ್ತಂಗಡಿ ಠಾಣೆಗೆ ಇಂದು ದೂರು ನೀಡಿದ್ದಾರೆ.

ಈ ಬಗ್ಗೆ ಯುವಕನ ಬಳಿ ವಿಚಾರಿಸಿದಾಗ ಲಿಂಕ್ ಮೂಲಕ ಸೇರುವ ‘ಬೆಳ್ತಂಗಡಿ ನ್ಯೂಸ್ ‘ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ನಾನು ಇದ್ದು ಇದರಲ್ಲಿ ಹಿಂದೂ, ಮುಸ್ಲಿಂ ಹಾಗೂ ವಿವಿಧ ಪಕ್ಷದವರು ಅಲ್ಲದೇ ಹೊರದೇಶದ ಯುವಕರು ಇದ್ದು ಇದರಲ್ಲಿ ಒಂದು ವಾರದಿಂದ ಭಾರೀ ಗಲಾಟೆ ನಡೆಯುತ್ತಿತ್ತು, ಇದರಲ್ಲಿ ನಾನು ಕೂಡ ಚರ್ಚೆ ಮಾಡುತ್ತಿದ್ದ ಕಾರಣ ಕೋಪಗೊಂಡು ಹೊರದೇಶದಿಂದ ಸುಳ್ಳು ಸುದ್ದಿಯನ್ನು ಸೃಷ್ಟಿ ಮಾಡಿ ನನ್ನ ಬಗ್ಗೆ ಈ ರೀತಿ ಅಪಪ್ರಚಾರ ಮಾಡಿದ್ದಾರೆ ಎಂದು ಮಹಾ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯಿಸಿದ್ದಾರೆ.

- Advertisement -

Latest News

error: Content is protected !!