Sunday, June 7, 2026
Homeಕರಾವಳಿಉಡುಪಿಉಡುಪಿ: ಸೌದಿ ಜೈಲಿನಿಂದ ತಾಯ್ನಾಡಿಗೆ ವಾಪಸ್ಸಾದ ಹರೀಶ್ ಬಂಗೇರ!

ಉಡುಪಿ: ಸೌದಿ ಜೈಲಿನಿಂದ ತಾಯ್ನಾಡಿಗೆ ವಾಪಸ್ಸಾದ ಹರೀಶ್ ಬಂಗೇರ!

- Advertisement -
- Advertisement -

ಉಡುಪಿ : ಯಾರೋ ಮಾಡಿದ ತಪ್ಪಿಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಕುಂದಾಪುರದ ಬಿಜಾಡಿಯ ಹರೀಶ್‌ ಬಂಗೇರರವರು ತಾಯ್ನಾಡಿಗೆ ಮರಳಿದ್ದಾರೆ. ಒಂದು ವರ್ಷ ಏಳು ತಿಂಗಳ ಬಳಿಕ ಬುಧವಾರ ಬೆಳಗ್ಗೆ ಬೆಂಗಳೂರಿಗೆ ಹರೀಶ್ ರವರು ಆಗಮಿಸಿದ್ದಾರೆ.

ಈ ಬಗ್ಗೆ ಹರೀಶ್‌ ಅವರ ಪತ್ನಿ ಸುಮನಾ ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಉಡುಪಿ ಪೊಲೀಸರು ಆರೋಪಿಗಳಾದ ಮೂಡುಬಿದಿರೆಯ ಅಬ್ದುಲ್ ಹುಯೇಸ್ ಹಾಗೂ ತುವೇಸ್ ನನ್ನು ಬಂಧಿಸಿದರು. ಈ ಸಹೋದರರಿಬ್ಬರು ಹರೀಶ್ ಹೆಸರಲ್ಲಿ ನಕಲಿ ಖಾತೆ ತೆರೆದು ಸೌದಿ ದೂರ ಹಾಗೂ ಮಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಅನಂತರ ಅದರ ಸ್ಟೀನ್ ಶಾಟ್ ತೆಗೆದು ಖಾತೆಯನ್ನು ಡಿಲೀಟ್ ಮಾಡಿದ್ದರು. ಇದು ಹರೀಶ್ ಅವರೇ ಹಾಕಿದ ಪೋಸ್ಟ್ ಎಂದು ತಿಳಿದು ಸೌದಿ ಪೊಲೀಸರು 2019ರ ಡಿಸೆಂಬರ್‌ನಲ್ಲಿ ಬಂಧಿಸಿದ್ದರು

- Advertisement -

Latest News

error: Content is protected !!