Friday, September 11, 2026
Homeಅಪರಾಧಮೂಡಬಿದರೆಯಲ್ಲಿ ಚಿಕ್ಕಪ್ಪನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಮೂಡಬಿದರೆಯಲ್ಲಿ ಚಿಕ್ಕಪ್ಪನಿಂದಲೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

- Advertisement -
- Advertisement -

ಮೂಡಬಿದಿರೆ: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯನ್ನು ಆಕೆಯ ಚಿಕ್ಕಪ್ಪನೆ ಅತ್ಯಾಚಾರವೆಸಗಿರುವ ಘಟನೆ ಮೂಡಬಿದಿರೆಯ ತೆಂಕಮಿಜಾರಿನಲ್ಲಿ ನಡೆದಿದೆ.  ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.


ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಬಾಲಕಿ ತನ್ನ ಸ್ನೇಹಿತೆಯೊಂದಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಗುಡ್ಡ ಪ್ರದೇಶದಲ್ಲಿ ಆಕೆಯ ಚಿಕ್ಕಪ್ಪ ಕುಮಾರ್(30) ಎಂಬಾತ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ್ದು ಆಗ ಇನ್ನೋರ್ವ ವಿದ್ಯಾರ್ಥಿನಿ ಹೆದರಿ ಓಡಿ ಹೋಗಿದ್ದಾಳೆ. ತನ್ನ ಅಣ್ಣನ ಮಗಳು ಎಂಬ ಕರುಣೆಯನ್ನು ತೋರದ ಆತ ಆಕೆಯನ್ನು ಅತ್ಯಾಚಾರ ನಡೆಸಿದ್ದಾನೆ.ಮೂಡಬಿದಿರೆ ಪೊಲೀಸರು ಫೋಕ್ಸೋ ಕಾಯ್ದೆಯಡಿಯಲ್ಲಿ ಅತ್ಯಾಚಾರಿಯನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!