Monday, June 8, 2026
Homeಕರಾವಳಿಉಡುಪಿಎಸ್ ಎಸ್ ಎಲ್ ಸಿ ಫಲಿತಾಂಶ: ಉಡುಪಿ ಜಿಲ್ಲೆಯ ನಾಲ್ವರಿಗೆ 625 ಅಂಕ

ಎಸ್ ಎಸ್ ಎಲ್ ಸಿ ಫಲಿತಾಂಶ: ಉಡುಪಿ ಜಿಲ್ಲೆಯ ನಾಲ್ವರಿಗೆ 625 ಅಂಕ

- Advertisement -
- Advertisement -

ಉಡುಪಿ: ಇಂದು ಪ್ರಕಟವಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಕೂಡಾ ಸಾಧನೆ ಮಾಡಿದ್ದಾರೆ. ಉಡುಪಿ ಜಿಲ್ಲೆಯ ನಾಲ್ಕು ವಿದ್ಯಾರ್ಥಿಗಳಿಗೆ 625ರಲ್ಲಿ 625 ಅಂಕ ಸಿಕ್ಕಿದೆ.

ಉಡುಪಿ ನಗರದ ಒಳಕಾಡು ಸರಕಾರಿ ಪ್ರೌಢಶಾಲೆಯ ಅಭಿಷೇಕ್, ಟಿ‌.ಎ. ಪೈ ಅಂಗ್ಲ ಮಾಧ್ಯಮ ಶಾಲೆ ನವನೀತ್ ಮತ್ತು ಕುಂದಾಪುರ ತಾಲೂಕಿನ ಎಸ್. ವಿ. ಕೆ. ಆಚಾರ್ಯ ಪ್ರೌಢಶಾಲೆಯ ಪ್ರಣಿತ ರಾವ್ ಮತ್ತು ಅನುಶ್ರೀ ಶೆಟ್ಟಿ ಅವರುಗಳಿಗೆ 625 ಅಂಕ ಲಭಿಸಿದೆ.

ಕೊರೋನಾ ಆತಂಕದ ನಡುವೆ ಎರಡು ದಿನಗಳ ಕಾಲ ಮುಂಜಾಗ್ರತಾ ಕ್ರಮಗಳೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆದಿತ್ತು. ಇಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಘೋಷಣೆ ಮಾಡಿದ್ದು, ನಾಳೆ ಶಾಲೆಗಳಲ್ಲಿ ಫಲಿತಾಂಶ ಲಭ್ಯವಾಗಲಿದೆ.

- Advertisement -

Latest News

error: Content is protected !!