Saturday, June 6, 2026
Homeಕರಾವಳಿಉಡುಪಿಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಆಸಕ್ತಿಯಿತ್ತು!: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಆಸಕ್ತಿಯಿತ್ತು!: ಸಚಿವ ಕೋಟ ಶ್ರೀನಿವಾಸ ಪೂಜಾರಿ

- Advertisement -
- Advertisement -

ಮಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆ ಮೇಲೆ ಆಸಕ್ತಿ ಇತ್ತು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಮಗಿದ್ದ ಆಸಕ್ತಿಯನ್ನು ಬಹಿರಂಗಪಡಿಸಿದ್ದಾರೆ. ಮಂಗಳೂರಿನಲ್ಲಿ ಇಂದು ಮಾತನಾಡಿದ ಸಚಿವ ಕೋಟ, ಗ್ರಾಮೀಣಾಭಿವೃದ್ಧಿ ಖಾತೆಯನ್ನೇ ಈಶ್ವರಪ್ಪ ಅವರಿಗೆ ನೀಡಿದ್ದಾರೆ‌ ಎಂದು ಹೇಳಿದ್ದಾರೆ‌.

ನಮ್ಮ ನಮ್ಮ ಆಸಕ್ತಿ ಕ್ಷೇತ್ರದ ಆಕಾಂಕ್ಷೆ ಸಾಮಾನ್ಯವಾಗಿರುತ್ತದೆ, ಈಶ್ವರಪ್ಪ ನನಗಿಂತ ಹಿರಿಯರಿದ್ದಾರೆ ಎಂದು ಹೇಳಿರುವ ಸಚಿವರು, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ನಮ್ಮ ಕೆಲಸ ಆಗಬೇಕು ಅಂತಾ ಬಂದ್ರೆ ಈಶ್ವರಪ್ಪ ಇದ್ದಾರೆ‌ ಅವರ ಬಳಿ ಮಾಡಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ಸಚಿವ ಕೋಟಾಗೆ ಬಿಜೆಪಿ ಕಾರ್ಯಕರ್ತರು ಹೂವಿನ ಹಾರ ಹಾಕಿದಾಗ ನನಗಿಂತ ದೊಡ್ಡ ಹಾರ ತಂದಿದ್ದೀರಲ್ಲಾ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರಿಂದ ಹಾರ ಹಾಕಿ ಅಭಿನಂದನೆ ಸಲ್ಲಿಕೆ ಕೂಡಾ ನಡೆಯಿತು.

- Advertisement -

Latest News

error: Content is protected !!