Saturday, July 5, 2025
Homeಕರಾವಳಿಮಂಗಳೂರು ರೈಲು ನಿಲ್ದಾಣಕ್ಕೆ ಬಂದ 51 ಮಂದಿ ಕ್ವಾರಂಟೈನ್: ನೆಗೆಟಿವ್ ವರದಿ ಇದ್ದರಷ್ಟೇ ಜಿಲ್ಲೆಗೆ ಎಂಟ್ರಿ!

ಮಂಗಳೂರು ರೈಲು ನಿಲ್ದಾಣಕ್ಕೆ ಬಂದ 51 ಮಂದಿ ಕ್ವಾರಂಟೈನ್: ನೆಗೆಟಿವ್ ವರದಿ ಇದ್ದರಷ್ಟೇ ಜಿಲ್ಲೆಗೆ ಎಂಟ್ರಿ!

spot_img
- Advertisement -
- Advertisement -

ಮಂಗಳೂರು: ಕೇರಳ ಹಾಗೂ ಮಹಾರಾಷ್ಟ್ರದಿಂದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಇಲ್ಲದೆ ಮಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಿದ 51 ಪ್ರಯಾಣಿಕರನ್ನು ಪುರಭವನದಲ್ಲಿ ತಾತ್ಕಾಲಿಕ ಕ್ವಾರಂಟೈನ್ ಮಾಡಲಾಗಿದೆ ಎಂದು ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಎಲ್ಲರ ಸ್ವಾಬ್ ಸಂಗ್ರಹಿಸಿದ್ದು ಪರೀಕ್ಷೆ ವರದಿ ಬರುವವರೆಗೆ ಟೌನ್ ಹಾಲ್ ನಲ್ಲಿ ಇರಿಸಲಾಗುವುದು. ಯುವತಿಯರು, ಮಹಿಳೆಯರನ್ನು ರಾತ್ರಿ ವೇಳೆ ಮನೆಗೆ ತೆರಳಲು ಅವಕಾಶ ನೀಡಿದ್ದು ಪ್ರತ್ಯೇಕ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚಿಸಲಾಗಿದೆ.

ಪುರುಷರು ಟೌನ್ ಹಾಲ್ ನಲ್ಲಿಯೇ ಇರುವಂತೆ ಸೂಚಿಸಿದ್ದು ಪರೀಕ್ಷೆಯಲ್ಲಿ‌ ನೆಗೆಟಿವ್ ಬಂದಂತಹ ಪ್ರಯಾಣಿಕರನ್ನು ಜಿಲ್ಲೆಗೆ ಪ್ರವೇಶಿಸಲು ಅವಕಾಶ ನೀಡಲಾಗುವುದು.‌ ಪಾಸಿಟಿವ್ ಬಂದ ಪ್ರಯಾಣಿಕರನ್ನು ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಳುಹಿಸಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.

ಈ ತಪಾಸಣಾ ಕಾರ್ಯಾಚರಣೆಯು ದೇಶದ ಎಲ್ಲ ರೈಲು ನಿಲ್ದಾಣಗಳಲ್ಲಿ ನಡೆಯುತ್ತಿದೆ.‌ ಮುಂದಿನ ದಿನಗಳಲ್ಲೂ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಡಿಸಿಪಿ‌‌ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!