- Advertisement -
- Advertisement -
ಕಾರ್ಕಳ : ತಾಲೂಕಿನ ದುರ್ಗ ಬಳಿಯ ಅರ್ಭಿ ಫಾಲ್ಸ್ ನಲ್ಲಿ ಈಜಲು ಹೋದ ವಿದ್ಯಾರ್ಥಿನಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪಿದ ಘಟನೆ ಸೋಮವಾರ ಸಂಭವಿಸಿದೆ.
ವರ್ಷಿತಾ ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿನಿಯನ್ನು ವರ್ಷಿತಾ ಎಂದು ಗುರುತಿಸಲಾಗಿದೆ. ಮೂಲತಃ ಮಂಗಳೂರಿನವಳಾದ ವರ್ಷಿತಾ ಕಾರ್ಕಳದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಯೊಟೆಕ್ ವಿಭಾಗದಲ್ಲಿ ಕಲಿಯುತಿದ್ದಳು ಎನ್ನಲಾಗಿದೆ.
ಈಕೆ ವಿದ್ಯಾರ್ಥಿಗಳಿಬ್ಬರ ಜೊತೆ ನಿಷೇಧಿತ ಅರ್ಭಿ ಫಾಲ್ಸ್ ಗೆ ತೆರಳಿದ್ದು ಈಜಲೆಂದು ನೀರಿಗೆ ಇಳಿದಿದ್ದಳು. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿದೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -