Thursday, June 4, 2026
Homeಚಿಕ್ಕಮಗಳೂರುವಿದ್ಯುತ್ ತಂತಿ ಬೇಲಿಗೆ ಕಾಡಾನೆ ಬಲಿ!

ವಿದ್ಯುತ್ ತಂತಿ ಬೇಲಿಗೆ ಕಾಡಾನೆ ಬಲಿ!

- Advertisement -
- Advertisement -

ಚಿಕ್ಕಮಗಳೂರು: ಖಾಸಗಿ ಜಮೀನಿಗೆ ಅಳವಡಿಸಲ್ಪಟ್ಟಿದ್ದ ತಂತಿ ಬೇಲಿಯ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಸಾವಿಗೀಡಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನಲ್ಲಿ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಗಾಳಿ ಪೂಜೆ ಗ್ರಾಮದಲ್ಲಿ ಕಾಡಾನೆ ಮೃತಪಟ್ಟಿದೆ.

ಸುಮಾರು 25 ವರ್ಷದ ಒಂಟಿ ಸಲಗ ಸಾವಿಗೀಡಾಗಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆ ಸಾವಿನ ಹಿನ್ನೆಲೆಯಲ್ಲಿ ಖಾಸಗಿ ಜಮೀನಿನ ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜಮೀನಿಗೆ ಕಾಡು ಪ್ರಾಣಿಗಳ ಹಾವಳಿ ಕಾರಣದಿಂದಾಗಿ ವಿದ್ಯುತ್ ತಂತಿ ಬೇಲಿ ಅಳವಡಿಸಲಾಗಿತ್ತು.

- Advertisement -

Latest News

error: Content is protected !!