Saturday, June 6, 2026
Homeಕರಾವಳಿಇಂದಿನಿಂದ ಕರ್ನಾಟಕ- ಕೇರಳ ಗಡಿಗಳಲ್ಲಿ ಹೈ ಅಲರ್ಟ್: ಮಂಗಳೂರು -ಕಾಸರಗೋಡು ಬಸ್ ಬಂದ್

ಇಂದಿನಿಂದ ಕರ್ನಾಟಕ- ಕೇರಳ ಗಡಿಗಳಲ್ಲಿ ಹೈ ಅಲರ್ಟ್: ಮಂಗಳೂರು -ಕಾಸರಗೋಡು ಬಸ್ ಬಂದ್

- Advertisement -
- Advertisement -

ಮಂಗಳೂರು: ಕೇರಳದಲ್ಲಿ ಕೋವಿಡ್ -19 ಪ್ರಕರಣಗಳು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಕೇರಳ-ಕರ್ನಾಟಕ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ‌. ಮಂಗಳೂರು-ಕಾಸರಗೋಡು ಮಧ್ಯೆ ಬಸ್ ಸಂಚಾರ ಸ್ಥಗಿತಗೊಂಡಿದ್ದು ಇಂದಿನಿಂದ ಒಂದು ವಾರಗಳ ಕಾಲ ಕಾಸರಗೋಡಿಗೆ ಬಸ್ ಸಂಚಾರ ಬಂದ್ ಮಾಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಎರಡೂ ಬಸ್ ಸಂಚಾರ ಸ್ಥಗಿತಗೊಂಡಿದೆ.

ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ವಿದ್ಯಾರ್ಥಿಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದ್ದು, ವಿದ್ಯಾರ್ಥಿಗಳು ಮಂಗಳೂರಿನ ವಿದ್ಯಾರ್ಥಿ ನಿಲಯಗಳಲ್ಲಿಯೇ ಒಂದು ವಾರ ಕ್ವಾರಂಟೈನ್‍ನಲ್ಲಿರಲು ಸೂಚನೆ ನೀಡಲಾಗಿದೆ.‌ ಮಂಗಳೂರು-ಕೇರಳ ಗಡಿ ತಲಪಾಡಿ,‌ ಜಾಲ್ಸೂರು, ವಿಟ್ಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 18 ಗಡಿಗಳಲ್ಲಿ ಅಲರ್ಟ್ ಏರ್ಪಡಿಸಲಾಗಿದೆ.‌

ಇಂದಿನಿಂದ ಜಿಲ್ಲೆ ಪ್ರವೇಶಕ್ಕೆ ಎರಡು ಡೋಸ್ ವ್ಯಾಕ್ಸಿನೇಷನ್‌ ಆಗಿದ್ದರೂ ನೆಗೆಟಿವ್ ರಿಪೋರ್ಟ್ ಹೊಂದಿರುವುದು ಕಡ್ಡಾಯವಾಗಿದೆ.‌

- Advertisement -

Latest News

error: Content is protected !!