Sunday, June 7, 2026
Homeಕರಾವಳಿಬೆಳ್ತಂಗಡಿ ತಾಲೂಕಿನ ಜನರಿಗಾಗಿ ಆನ್ಲೈನ್ ದೇಶಭಕ್ತಿ ಗೀತೆ ಸ್ಪರ್ಧೆ; ಶಾಸಕ ಹರೀಶ್ ಪೂಂಜಾರಿಂದ ವಿನೂತನ...

ಬೆಳ್ತಂಗಡಿ ತಾಲೂಕಿನ ಜನರಿಗಾಗಿ ಆನ್ಲೈನ್ ದೇಶಭಕ್ತಿ ಗೀತೆ ಸ್ಪರ್ಧೆ; ಶಾಸಕ ಹರೀಶ್ ಪೂಂಜಾರಿಂದ ವಿನೂತನ ಪ್ರಯತ್ನ!

- Advertisement -
- Advertisement -

ಬೆಳ್ತಂಗಡಿ : ಭಾರತ ಸ್ವಾತಂತ್ರ್ಯಗೊಂಡು 75 ವರ್ಷಗಳ ಅಮೃತಮಹೋತ್ಸವವನ್ನು ಆಚರಿಸುತ್ತಿರುವ ಈ ಸುಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಜನರಿಗೆ ಶಾಸಕ ಹರೀಶ್ ಪೂಂಜಾರವರು ಭರ್ಜರಿ ಆಫರ್ ಒಂದನ್ನು ನೀಡಿದ್ದಾರೆ.

ಹೌದು. ಬೆಳ್ತಂಗಡಿ ಶಾಸಕರು ತಮ್ಮ ಜನತೆಗಾಗಿ ಆನ್ಲೈನ್ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ,ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದವರಿಗೆ 10,000 ನಗದು ಬಹುಮಾನ ಹಾಗೂ ದ್ವಿತೀಯ ಬಹುಮಾನ ಗಳಿಸಿದವರಿಗೆ ೫,000 ನಗದು ಬಹುಮಾನವನ್ನು ಘೋಷಿಸಲಾಗಿದೆ.ಮಕ್ಕಳಿಂದ ಹಿಡಿದು ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಸಲಾಗುತ್ತದೆ ಎಂದು ತಮ್ಮ ಸಾಮಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಆಗಸ್ಟ್ 10 ರೊಳಗೆ ಸ್ಪರ್ಧಾರ್ಥಿಗಳು +916366698524 ವಾಟ್ಸಾಪ್ ನಂಬರ್ ಗೆ ಹೆಸರು ವಿಳಾಸ ಮತ್ತು ಆಧಾರಕಾರ್ಡ್ ನೊಂದಿಗೆ ರೆಕಾರ್ಡ್ ಮಾಡಿದ ವಿಡಿಯೋವನ್ನು ಕಳುಹಿಸಬೇಕು. ಎಡಿಂಟಿಂಗ್ ಮಾಡಿದ ವಿಡಿಯೋವನ್ನು ಪರಿಗಣಿಸುವುದಿಲ್ಲ ಹಾಗೂ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ ಎಂಬ ಷರತ್ತನ್ನು ಕೂಡ ಹಾಕಲಾಗಿದೆ.

- Advertisement -

Latest News

error: Content is protected !!