Thursday, July 3, 2025
Homeಕರಾವಳಿಉಪ್ಪಿನಂಗಡಿ: ರಸ್ತೆಯಲ್ಲಿದ್ದ ಹೊಂಡಗಳಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ ತಾಯಿ ಮಗಳು!!

ಉಪ್ಪಿನಂಗಡಿ: ರಸ್ತೆಯಲ್ಲಿದ್ದ ಹೊಂಡಗಳಿಗೆ ಕಲ್ಲು ಮಣ್ಣು ಹಾಕಿ ಮುಚ್ಚಿದ ತಾಯಿ ಮಗಳು!!

spot_img
- Advertisement -
- Advertisement -

ಉಪ್ಪಿನಂಗಡಿ: ಅಪಘಾತವನ್ನು ತಪ್ಪಿಸುವ ಸಲುವಾಗಿ ತಾಯಿ ಮತ್ತು ಮಗಳು ಸೇರಿಕೊಂಡು ಕಡಬ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಉಂಟಾದ ಹೊಂಡಗಳಿಗೆ ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚಿ ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ಪೆರಿಯಡ್ಕದ ಕಿಂಡೋವಿನಲ್ಲಿ ರಸ್ತೆಯಲ್ಲಿ ಉಂಟಾದ ಗುಂಡಿಯನ್ನು ಸ್ಥಳೀಯ ಆಶಾ ಕಾರ್ಯಕರ್ತೆಯೂ ಆಗಿರುವ ಅನಂತಾವತಿ ಮತ್ತು ತಾಯಿ ಸೇಸಮ್ಮ ಸೇರಿಕೊಂಡು ಮಣ್ಣು ಮತ್ತು ಕಲ್ಲುಗಳನ್ನು ಹಾಕಿ ಮುಚ್ಚಿದ್ದಾರೆ.

ಪ್ರತಿ ವರ್ಷವೂ ಈ ಜಾಗದಲ್ಲಿ ಮಳೆಗಾಲಕ್ಕೆ ಹೊಂಡಗಳು ನಿರ್ಮಾಣವಾಗುತ್ತದೆ ಹಾಗೂ 3 ವರ್ಷಗಳಿಂದ ಅನೇಕ ಬಾರಿ ಅಪ‌ಘಾತಗಳಾಗಿ ಸಾವು-ನೋವು ಕೂಡ ಸಂಭವಿಸಿದೆ. ನಮ್ಮ ಮನೆ ಇಲ್ಲೇ ಸಮೀಪದಲ್ಲಿದ್ದು, ವಾಹನಗಳ ಚಕ್ರಗಳು ಈ ಹೊಂಡಗಳಿಗೆ ಬಿದ್ದಾಗ ಭಾರೀ ಶಬ್ದ ಕೇಳಿಸುವುದಲ್ಲದೆ ಅಪಘಾತದ ದೃಶ್ಯಗಳು ಕಣ್ಣಮುಂದೆ ಬಂದು ನಿಲ್ಲುತ್ತವೆ.ಅಂತಹ ಘಟನೆಗಳು ಮುಂದೆ ಸಂಭವಿಸದಿರಲಿ ಎಂದು ನಮ್ಮಿಂದ ಆಗುವ ಸೇವೆ ಮಾಡುತ್ತಿದ್ದೇವೆ ಎಂದು ಅನಂತಾವತಿ ಪ್ರತಿಕ್ರಿಯಿಸಿದ್ದಾರೆ

- Advertisement -
spot_img

Latest News

error: Content is protected !!