Thursday, June 4, 2026
Homeಕರಾವಳಿಉಡುಪಿವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ; ಇಬ್ಬರು ಆರೋಪಿಗಳ ಬಂಧನ

ವಿಟ್ಲ: ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ; ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಕಾಶಿಮಠ ಎಂಬಲ್ಲಿ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.

ಅಸೀಫ್ ಯಾನೆ ಅಚಿ (28) ಹಾಗೂ ಫರಾಝ್ (23) ಬಂಧಿತ ಆರೋಪಿಗಳು.ವಿಟ್ಲ ಪೊಲೀಸ್ ಠಾಣೆಯ ನಾಗರಾಜ ಹೆಚ್‌ ಮತ್ತು ಪ್ರೊಬೆಷನರಿ ಸಿಬ್ಬಂದಿಗಳಾದ ಪ್ರಸನ್ನ, ಪ್ರತಾಪ್,ಲೋಕೇಶ್ ಹಾಗೂ ಪ್ರವೀಣ್ ರವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉಕ್ಕುಡ ಕಡೆಯಿಂದ ವಿಟ್ಲ ಪೇಟೆ ಕಡೆಗೆ ಬಂದ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಪೊಲೀಸರು ಚಾಲಕನಿಗೆ ವಾಹನವನ್ನು ನಿಲ್ಲಿಸಲು ಸೂಚನೆ ನೀಡುತ್ತಾರೆ. ಆದರೆ ಚಾಲಕನು ಒಮ್ಮೆಲೇ ಆಟೋ ರಿಕ್ಷಾವನ್ನು ತಿರುಗಿಸಿದ ಕಾರಣ ಚಾಲಕನ ಹತೋಟಿ ತಪ್ಪಿ 30 ಅಡಿ ದೂರದಲ್ಲಿ ಉಕ್ಕಡ ಕಡೆಗೆ ಮುಖ ಮಾಡಿ ಆಟೋ ಮಗುಚಿ ಬಿದ್ದಿದೆ. ಅವರ ರಕ್ಷಣೆಗೆ ಸಿಬ್ಬಂದಿಗಳು ಹೋದಾಗ ಅವರು ಬಿದ್ದ ಸ್ಥಳದಿಂದ ಓಡಿ ಹೋಗಲು ಪ್ರಯತ್ನಿಸುತ್ತಾರೆ. ಅನುಮಾನಗೊಂಡ ಪೊಲೀಸರು ಆಟೋ ರಿಕ್ಷಾವನ್ನು ಪರಿಶೀಲಿಸಿದಾಗ , ಚಾಲಕನ ಸೀಟಿನ ಅಡಿಯಲ್ಲಿ ಒಟ್ಟು 2060 ಗ್ರಾಂ ಗಾಂಜಾ ಪತ್ತೆಯಾಗಿದೆ. ಸದ್ಯ ಆಟೋ ರಿಕ್ಷಾವನ್ನು ಹಾಗೂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ..

ಆರೋಪಿತರು ಅಕ್ರಮವಾಗಿ ನಿಷೇಧಿತ ಗಾಂಜಾ ಎಂಬ ಮಾದಕ ವಸ್ತುವನ್ನು ಯಾವುದೇ ಪರವಾನಿಗೆ ಹಾಗೂ ದಾಖಲಾತಿಗಳಿಲ್ಲದೇ ತಮ್ಮ ವಶದಲ್ಲಿ ಇಟ್ಟುಕೊಂಡು ಗಿರಾಕಿಗಳಿಗೆ ಮಾರಾಟ ಮಾಡಲು ಸಾಗಿಸಲು ಪ್ರಯತ್ನಿಸಿರುವುದು ದೃಢ ಪಟ್ಟಿರುವುದರಿಂದ ಆರೋಪಿ ಅಸೀಫ್ ಯಾನೆ ಅಚಿ ಮತ್ತು ಫರಾಝ್ ಎಂಬಾತನ ವಿರುದ್ಧ ಕಾನೂನು ಕ್ರಮ ಕೈಗೊಂಡಿಕೈಗೊಂಡಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!