Monday, August 24, 2026
Homeಕರಾವಳಿಪುತ್ತೂರು:ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವು ;ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

ಪುತ್ತೂರು:ಬೀದಿ ಬದಿ ವ್ಯಾಪಾರಿಗಳ ಅಂಗಡಿ ತೆರವು ;ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ

- Advertisement -
- Advertisement -

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರಸಭಾ ಕಚೇರಿ ಎದುರು ಬೀದಿಬದಿ ವ್ಯಾಪಾರಸ್ಥರ ಅಂಗಡಿಗಳ ತೆರವುಗೊಳಿಸಿರುವುದನ್ನು ವಿರೋಧಿಸಿ ಹಾಗೂ ಸಂತ್ರಸ್ತ ವ್ಯಾಪಾರಸ್ಥರಿಗೆ ಮರು ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಯಿತು.


ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ, ಈಗಾಗಲೇ ಕೊರೋನಾ ಸೋಂಕಿನಿಂದ ಆರ್ಥಿಕವಾಗಿ ಕುಗ್ಗಿ ಹೋಗಿರುವ ಬಡ ಕುಟುಂಬಗಳು ತಮ್ಮ ಜೀವನೋಪಾಯಕ್ಕಾಗಿ ಬೀದಿ ಬದಿಯಲ್ಲಿ ಸಣ್ಣ ಪುಟ್ಟ ವ್ಯಾಪಾರ ನಡೆಸುತ್ತಿದ್ದಾರೆ. ನಗರ ಸಭೆಯು ಬಿಜೆಪಿ ನೇತೃತ್ವದಲ್ಲಿದ್ದು ವ್ಯಾಪಾರಿಗಳ ಅಂಗಡಿಗಳನ್ನು ಯಾವುದೇ ಪೂರ್ವಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿ ದೌರ್ಜನ್ಯ ಎಸಗಿದೆ. ಬಿಜೆಪಿಗರಿಗೆ ಬಡವರ ಹಸಿವಿನ ಬೆಲೆ ಗೊತ್ತಿಲ್ಲ. ಬಿಜೆಪಿ ಯಾವಾಗಲೂ ಶ್ರೀಮಂತರ ಪರವಾಗಿರುವ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಆರೋಪಿಸಿದರು.

ಅಷ್ಟೇ ಅಲ್ಲದೆ ತೆರವುಗೊಳಿಸಲಾಗಿರುವ ಅಂಗಡಿಗಳನ್ನು ಮತ್ತೆ ನಿರ್ಮಿಸಿ ಸಂತ್ರಸ್ತ ವ್ಯಾಪಾರಿಗಳಿಗೆ ಪರಿಹಾರ ಒದಗಿಸುವ ಕೆಲಸ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಪುತ್ತೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಆಲಿ ,ಪುತ್ತೂರು ಬ್ಲಾಕ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮೋಹನ ಗೌಡ ಕಲ್ಮಂಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಮಾತನಾಡಿ ನಗರಸಭೆಯ ಕಾರ್ಯಾಚರಣೆಯನ್ನು ಖಂಡಿಸಿದರು.

ಬೀದಿಬದಿ ವ್ಯಾಪಾರಿಗಳಾದ ಲವಿಟಾ, ಈಶ್ವರ್, ಕೃಷ್ಣಪ್ಪ ಗೌಡ, ಕೇಶವ, ಚೆನ್ನಪ್ಪ, ಅಬೀಬ್, ಅಬ್ದುಲ್ ರಹಿಮಾನ್ ಲಕ್ಷ್ಮಣ್, ಮಹಮ್ಮದ್ ಹಸನ್ ಅಳಲು ತೋಡಿಕೊಂಡರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಕುಮಾರ್ ಭಂಡಾರಿ, ನಗರಸಭೆ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಪಕ್ಷದ ಮುಖಂಡರಾದ ಕುಂಬ್ರ ದುರ್ಗಾಪ್ರಸಾದ್ ರೈ, ಎ.ಕೆ.ಜಯರಾಮ್ ರೈ, ಶೈಲಾ ಪೈ, ವಿಶಾಲಾಕ್ಷಿ ಬನ್ನೂರು, ಶಕೂರ್ ಹಾಜಿ, ವಿಶ್ವಜಿತ್ ಅಮ್ಮುಂಜ, ಬಾಲಕೃಷ್ಣ ಗೌಡ, ಮಹಾಬಲ ರೈ ವಳತ್ತಡ್ಕ, ರಿಯಾಜ್, ಶಿವರಾಮ ಆಳ್ವ, ಯೂಸುಫ್ ಹಾಜಿ ದರ್ಬೆ, ಸಿರಿಲ್ ರೋಡ್ರಿಗಸ್, ಸೂಫಿ ಬಪ್ಪಳಿಗೆ, ಸನಮ್ ನಝೀರ್, ಯೂಸುಫ್ ದರ್ಬೆ, ಶರೂನ್ ಸಿಕ್ವೆರಾ, ಕೇಶವ ಪಡೀಲ್, ಯಾಕೂಬ್ ಮಲಾರ್, ಮೌರಿಸ್ ಮಸ್ಕರೇನಸ್, ಸಿದ್ದಿಕ್ ಸುಲ್ತಾನ್, ಪ್ರಜ್ವಲ್ ರೈ ತೊಟ್ಲ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

- Advertisement -

Latest News

error: Content is protected !!