Sunday, June 7, 2026
Homeಕರಾವಳಿಮಂಗಳೂರು:ಒಂಟಿ ಮಹಿಳೆ ಇದ್ದ ಕಾರಿನ ಟೈರ್ ಬದಲಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸರು!!

ಮಂಗಳೂರು:ಒಂಟಿ ಮಹಿಳೆ ಇದ್ದ ಕಾರಿನ ಟೈರ್ ಬದಲಿಸಿ ಮಾನವೀಯತೆ ಮೆರೆದ ಸಂಚಾರಿ ಪೊಲೀಸರು!!

- Advertisement -
- Advertisement -

ಮಂಗಳೂರು:ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಟೈರ್ ಪಂಕ್ಚರ್ ಆಗಿತ್ತು. ಅದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರ ಠಾಣೆ ಪೊಲೀಸರು ಬೇರೆ ಟೈರ್ ಅಳವಡಿಸಿ ಮಾನವೀಯತೆ ಮೆರೆದಿದ್ದು ಸದ್ಯ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಪಂಪ್ವೆಲ್ ಸಮೀಪ ಟೈರ್ ಪಂಕ್ಚರ್ ಆಗಿದ್ದು, ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದರು. ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟೈರ್‌ನ್ನು ಬದಲಿಸಿ ಮಾನವೀಯತೆ ಮೆರೆದಿದ್ದಾರೆ.

ಈ ಸಂದರ್ಭ ಸಂಚಾರ ಠಾಣೆ ಎಎಸ್‌ಐ ಅಲ್ಬರ್ಟ್ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು

- Advertisement -

Latest News

error: Content is protected !!