Friday, August 21, 2026
Homeಕರಾವಳಿಉಡುಪಿಶಿರಾಡಿ ಘಾಟ್ ನಲ್ಲಿ ಹೆದ್ದಾರಿ ಕುಸಿದ ಪ್ರಕರಣ: ದೋಣಿಗಲ್ ಗೆ ಕಂದಾಯ ಸಚಿವರ ಭೇಟಿ

ಶಿರಾಡಿ ಘಾಟ್ ನಲ್ಲಿ ಹೆದ್ದಾರಿ ಕುಸಿದ ಪ್ರಕರಣ: ದೋಣಿಗಲ್ ಗೆ ಕಂದಾಯ ಸಚಿವರ ಭೇಟಿ

- Advertisement -
- Advertisement -

ಹಾಸನ: ಅತಿವೃಷ್ಟಿಯಿಂದಾಗಿ ಸಕಲೇಶಪುರದ ದೋಣಿಗಲ್ ಬಳಿ ರಾಷ್ಟ್ರೀಯ ಹೆದ್ದಾರಿ ತೀವ್ರ ಕುಸಿತದಿಂದ ಹಾನಿಗೊಳಗಾದ ಪ್ರದೇಶಕ್ಕೆ ಕಂದಾಯ ಸಚಿವ ಆರ್. ಅಶೋಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅವರೊಂದಿಗೆ ಖುದ್ದು ಭೇಟಿ ನೀಡಿ ಅಶೋಕ್ ಪರಿಶೀಲನೆ ನಡೆಸಿದರು.

ಶಿರಾಡಿ ಘಾಟ್ ಇಂದಿನಿಂದಲೇ ಸಂಚಾರಕ್ಕೆ ಮುಕ್ತವಾಗಲಿದ್ದು, ಲಘು ವಾಹನಗಳಿಗೆ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಸ್ಥಳ ಪರಿಶೀಲನೆ ಬಳಿಕ ಸಚಿವ ಅಶೋಕ್ ತಿಳಿಸಿದ್ದಾರೆ.

ರಸ್ತೆ ಕುಸಿದಿರುವ ಜಾಗದಲ್ಲಿ ಹೆಚ್ಚಿನ ಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸಚಿವರು ಸೂಚನೆ ನೀಡಿದರು. ಸಂಚಾರಕ್ಕೆ ಪರ್ಯಾಯ ಮಾರ್ಗ ನಿಗದಿಪಡಿಸಲಾಗಿದ್ದು, ಶೀಘ್ರವೇ ರಸ್ತೆ ದುರಸ್ತಿ ಪಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಕಂದಾಯ ಸಚಿವ ಅಶೋಕ್ ಆದೇಶ ನೀಡಿದರು.

- Advertisement -

Latest News

error: Content is protected !!