Thursday, June 4, 2026
Homeಉತ್ತರ ಕನ್ನಡಉತ್ತರ ಕನ್ನಡ: ಕೊಚ್ಚಿ ಹೋದ ಸೇತುವೆ, 15 ಗ್ರಾಮಗಳ ಸಂಪರ್ಕ ಕಡಿತ

ಉತ್ತರ ಕನ್ನಡ: ಕೊಚ್ಚಿ ಹೋದ ಸೇತುವೆ, 15 ಗ್ರಾಮಗಳ ಸಂಪರ್ಕ ಕಡಿತ

- Advertisement -
- Advertisement -

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರವಾಹ ಉಂಟಾಗಿರುವ ಹಿನ್ನೆಲೆಯಲ್ಲಿ ಗುಳ್ಳಾಪುರ ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಅಂಕೋಲಾ ತಾಲೂಕಿನ 15 ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೇ ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳ ಸಂಪರ್ಕ ಕೂಡಾ ಕಡಿತ‌ಗೊಂಡಿದೆ.

ಸೇತುವೆ ಕೊಚ್ಚಿ ಹೋದ ಕಾರಣ ಆಹಾರ ವಸತಿ ಸೇರಿ ಸಮರ್ಪಕ ಸೌಕರ್ಯದ ಸಮಸ್ಯೆಯಿಂದ ಗುಳ್ಳಾಪುರ ಪ್ರದೇಶದಲ್ಲಿ ಜನ ಕಂಗಾಲಾಗಿದ್ದಾರೆ.

ಸೇತುವೆಯ ಒಂದು ಭಾಗದಿಂದ ಇನ್ನೊಂದು ಭಾಗದಲ್ಲಿರುವ ತಮ್ಮವರನ್ನು ನೋಡಲು ಸಾದ್ಯವಾಗದೆ ಈ ಭಾಗದ ಜನರು ಪರದಾಡುವಂತಾಗಿದೆ.

ಮಳೆಗೆ ಗುಡಿಸಲು ಬಳಿ ಜನ ಆಶ್ರಯ ಪಡೆದಿದ್ದು ಜನರ ಅಳಲು ಕೇಳಲು ಉತ್ತರ ಕನ್ನಡ ಜಿಲ್ಲಾಡಳಿತ ಇನ್ನೂ ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

- Advertisement -

Latest News

error: Content is protected !!