Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಮಳೆಗೆ ಕೊಚ್ಚಿ ಹೋದ ಕಾಲು ಸಂಕ, ಕಳಸ-ಹೊರನಾಡು ಸಂಪರ್ಕ ಕಡಿತ

ಚಿಕ್ಕಮಗಳೂರು: ಮಳೆಗೆ ಕೊಚ್ಚಿ ಹೋದ ಕಾಲು ಸಂಕ, ಕಳಸ-ಹೊರನಾಡು ಸಂಪರ್ಕ ಕಡಿತ

- Advertisement -
- Advertisement -

ಚಿಕ್ಕಮಗಳೂರು: ಭೀಕರ ಮಳೆಗೆ ಕಾಲು ಸಂಕ ಕೊಚ್ಚಿ ಹೋದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸಿದ್ದರಮಠದಲ್ಲಿ ನಡೆದಿದೆ.‌ ಇದರಿಂದಾಗಿ ಸಿದ್ದರಮಠ‌ ಮತ್ತು ಸೇಡ್ ಗಾರ್ ಗ್ರಾಮಗಳ ಸಂಪರ್ಕ ಕಡಿತವಾಗಿದೆ.

ಗ್ರಾಮ ಗ್ರಾಮಗಳ ನಡುವೆ ಸಂಪರ್ಕವಿಲ್ಲದೇ ಜನರು ಪರದಾಡುವಂತಾಗಿದ್ದು, ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇನ್ನು ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ.

ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಸೇತುವೆ ಸಂಪೂರ್ಣ ಮುಳುಗಡೆಯಾಗಿ ಸೇತುವೆ ಮೇಲೆ ಐದು ಅಡಿ ನೀರು‌ ಹರಿದಿದೆ.‌ ಇದರಿಂದಾಗಿ ಕಳಸ ಮತ್ತು ಹೊರನಾಡು ಸಂಪರ್ಕ ಬಂದ್ ಆಗಿದ್ದು ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.‌

- Advertisement -

Latest News

error: Content is protected !!