Thursday, July 3, 2025
Homeಕರಾವಳಿಉಡುಪಿಶಿರ್ವ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಪಾದೂರುಗುತ್ತು ಜೆ.ಕೆ.ಆಳ್ವ ಆಯ್ಕೆ !!

ಶಿರ್ವ ರೋಟರಿ ಕ್ಲಬ್ ನ ನೂತನ ಅಧ್ಯಕ್ಷರಾಗಿ ಪಾದೂರುಗುತ್ತು ಜೆ.ಕೆ.ಆಳ್ವ ಆಯ್ಕೆ !!

spot_img
- Advertisement -
- Advertisement -

ಶಿರ್ವ : ಉಡುಪಿ ಜಿಲ್ಲೆಯ ಹಿರಿಯ ಕ್ಲಬ್‍ಗಳಲ್ಲಿ ಒಂದಾದ ಶಿರ್ವ ರೋಟರಿಯ 51ನೇ ಸಾಲಿನ ಅಧ್ಯಕ್ಷರಾಗಿ ನ್ಯಾಯವಾದಿ ಪಾದೂರುಗುತ್ತು ಜೆ.ಕೆ. ಆಳ್ವ ಆಯ್ಕೆಯಾಗಿದ್ದಾರೆ.

ಇನ್ನು ನಿಕಟಪೂರ್ವ ಅಧ್ಯಕ್ಷರಾಗಿ ವಿಷ್ಣಮೂರ್ತಿ ಸರಳಾಯ, ಉಪಾಧ್ಯಕ್ಷರಾಗಿ ಹೊನ್ನಯ್ಯ ಶೆಟ್ಟಿಗಾರ್, ಕಾರ್ಯದರ್ಶಿಯಾಗಿ ಜಿನೇಶ್ ಬಲ್ಲಾಳ್ ಕುತ್ಯಾರು, ಕೋಶಾಧಿಕಾರಿಯಾಗಿ ರಘುಪತಿ ಐತಾಳ್, ದಂಡಪಾಣಿಯಾಗಿ ಕೋಡು ಸದಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ.

ಇನ್ನು ವಿವಿಧ ಸೇವೆಯ ನಿರ್ದೇಶಕರ ಪಟ್ಟಿಯಲ್ಲಿ ಸಂಘಸೇವೆಯಲ್ಲಿ ಹಸನಬ್ಬ ಶೇಖ್, ವೃತ್ತಿಪರ ಸೇವೆಯಲ್ಲಿ ಸುಧಾಕರ ಶೆಣೈ, ಸಮುದಾಯ ಸೇವೆಯಲ್ಲಿ ಪ್ರೊ.ವಿಠಲ್ ನಾಯಕ್, ಅಂತಾರಾಷ್ಟ್ರೀಯ ಸೇವೆಯಲ್ಲಿ ಮೈಕಲ್ ಮತಾಯಸ್, ನವಪೀಳಿಗೆ ಸಮಿತಿಯಲ್ಲಿ ಆಲ್ವಿನ್ ಅಮಿತ್ ಆರನ್ಹ, ರೋಟರಿ ಪ್ರತಿಷ್ಠಾನದಲ್ಲಿ ಬಿ. ಪುಂಡಲೀಕ ಮರಾಠೆ, ಪೋಲಿಯೋ ಪ್ಲಸ್-ಫಿಲಿಫ್ ಕಸ್ತಲಿನೊ, ಐಟಿ ಮತ್ತು ವೆಬ್ಸೈಟ್ -ಮೆಲ್ವಿನ್ ಡಿಸೋಜ, ಜಿಲ್ಲಾ ಯೋಜನೆಗಳು -ರಾಘವೇಂದ್ರ ನಾಯಕ್ ನೇಮಕಗೊಂಡಿದ್ದಾರೆ.

ಉಪನಿರ್ದೇಶಕರುಗಳಾಗಿ ಸಾರ್ವಜನಿಕ ಸಂಪರ್ಕ -ಮತಾಯಸ್ ಲೋಬೊ, ಫೆಲೊಶಿಪ್-ರೊನಾಲ್ಡ್ ಸಿಕ್ವೇರಾ, ಹಾಜರಾತಿ -ಹೆರಾಲ್ಡ್ ಕುಟಿನೊ, ರಹ್‍ಲಾ ಸಮಿತಿ – ಲೂಕಾಸ್ ಡಿಸೋಜ, ಚತುರ್ವಿಧ ಪರೀಕ್ಷೆ -ಡಾ. ಅರುಣ್ ಕುಮಾರ್ ಹೆಗ್ಡೆ, ವೃತ್ತಿಪರ ಜಾಗೃತಿ-ರಫಾಯಲ್ ಮತಾಯಸ್, ಬಳಕೆದಾರರ ಹಕ್ಕುಗಳು-ಮೈಕಲ್ ರಮೇಶ್ ಡಿಸೋಜ, ಮಾಹಿತಿ ಹಕ್ಕು-ಡಾ. ಎನ್. ಎಸ್. ಶೆಟ್ಟಿ, ಮಹಿಳಾ ಸಬಲೀಕರಣ – ರೊನಾಲ್ಡ್ ಮಾರ್ಕ್ ಡಿಸೋಜ ಆಯ್ಕೆಯಾಗಿದ್ದಾರೆ.

- Advertisement -
spot_img

Latest News

error: Content is protected !!