Sunday, June 7, 2026
Homeತಾಜಾ ಸುದ್ದಿಆಟೋರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಯುವಕರ ತಂಡದಿಂದ ವ್ಯಕ್ತಿಯ ಮೇಲೆ ಹಲ್ಲೆ

ಆಟೋರಿಕ್ಷಾದಲ್ಲಿ ಗೋಮಾಂಸ ಸಾಗಾಟ: ಯುವಕರ ತಂಡದಿಂದ ವ್ಯಕ್ತಿಯ ಮೇಲೆ ಹಲ್ಲೆ

- Advertisement -
- Advertisement -

ಕೊಡಗು: ಆಟೋರಿಕ್ಷಾದಲ್ಲಿ ಸುಮಾರು 2 ಕೆಜಿ ಗೋಮಾಂಸ ಸಾಗಿಸ್ತಿದ್ದ ಆರೋಪದಡಿಯಲ್ಲಿ ಯುವಕನೋರ್ವನಿಗೆ ಹಿಂದೂ ಸಂಘಟನೆ ಹೆಸರಲ್ಲಿ ತಂಡವೊಂದು ಹಲ್ಲೆ ನಡೆಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಸುಂಟಿಕೊಪ್ಪ ಸಮೀಪ ಗರಗಂದೂರು ಗ್ರಾಮದಲ್ಲಿ ಆಟೋ ಚಾಲಕ ಎಂ.ರಶೀದ್ ಎಂಬುವವರಿಗೆ ಹಿಂದೂ ಸಂಘಟನೆಯವರು ಎಂದು ಹೇಳಿಕೊಂಡ ಗುಂಪೊಂದು ಹಲ್ಲೆ ನಡೆಸಿದೆ. ಅಲ್ದೇ ಗೋಮಾಂಸ ಕೊಂಡೊಯ್ಯುತ್ತಿರುವ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರು ನೀಡಲಾಗಿದೆ.

ಈ ಬಗ್ಗೆ ಹಲವರ ವಿರುದ್ಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸುನೀಲ್, ಮನು, ಮಂಜು, ವಿನು ಮತ್ತಿತರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

- Advertisement -

Latest News

error: Content is protected !!