- Advertisement -
- Advertisement -
ಪುತ್ತೂರು: ಅಕ್ರಮವಾಗಿ ಬೀದಿ ಬದಿಯಲ್ಲಿ ನಿರ್ಮಾಣವಾದ ಅಂಗಡಿಗಳ ತೆರವು ಕಾರ್ಯಾಚರಣೆ ಜು.23 ರಂದು ಬೆಳಗ್ಗೆ ನಸುಕಿನ ಜಾವ ಪುತ್ತೂರು ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ನೇತೃತ್ವದಲ್ಲಿ ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಗರಸಭೆ ವ್ಯಾಪ್ತಿಯ ಹಲವೆಡೆ ಅಕ್ರಮವಾಗಿ ನಿರ್ಮಾಣಗೊಂಡ ಸಣ್ಣ ಪುಟ್ಟ ಅಂಗಡಿಗಳ ತೆರವು ಕಾರ್ಯಾಚರಣೆ ನಡೆದಿದ್ದು, ಯಾವುದೇ ಅನುಮತಿಯಿಲ್ಲದೆ ವ್ಯಾಪಾರ ಚಟುವಟಿಯನ್ನು ಮುಂದುವರಿಸುತ್ತಿದ್ದವರಿಗೆ ಅಧಿಕಾರಿಗಳು ಈ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ತಳ್ಳು ಗಾಡಿಯನ್ನು ಬಿಟ್ಟು ಅಕ್ರಮ ಕಟ್ಟಡವನ್ನು ತೆರವು ಮಾಡಲಾಗಿದೆ ಎಂದು ವರದಿಯಾಗಿದೆ.
- Advertisement -